ಸಂಶೋಧನೆ
ಕರ್ನಾಟಕ ಸಂಘವು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕವಾಗಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ.
ಸಂಶೋಧನ ಕೇಂದ್ರಕರ್ನಾಟಕ ರಂಗಮಂದಿರ ಶಿಲಾನ್ಯಾಸ ಸಮಾರಂಭ. 11-05-2023 ಗುರುವಾರ, ಸಂಜೆ : 400 ಗಂಟೆ. ಸ್ಥಳ: ಕರ್ನಾಟಕ ಸಂಘ® ಮಂಡ್ಯ
‘ಕರ್ನಾಟಕ ಸಂಘ’ ಕರ್ನಾಟಕದ ಹಿರಿಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದು. ಮಂಡ್ಯ ಜಿಲ್ಲೆಯ ಹಿರಿಯ ಸಾಂಸ್ಕೃತಿಕ ನಾಯಕರ ಆಸಕ್ತಿಯಂತೆ ಸ್ವಾತಂತ್ರ್ಯ ಪೂರ್ವದಲ್ಲೇ, ಅಂದರೆ 1933ರಲ್ಲಿ ಮಂಡ್ಯ ನಗರದಲ್ಲಿ ಈ ಸಂಘವು ಸ್ಥಾಪನೆಯಾಯಿತು.
ನಮ್ಮ ಸಂಘ
‘ಕರ್ನಾಟಕ ಸಂಘ’ ಕರ್ನಾಟಕದ ಹಿರಿಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದು. ಸಂಘವು ಅಧಿಕೃತವಾಗಿ 1946ರಲ್ಲಿ ನೋಂದಣಿಗೊಂಡು, ಇದೀಗ 75 ವರ್ಷಗಳನ್ನು ಪೂರೈಸಿ. ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. 2007ರವರೆಗೆ ಅನೇಕ ಏಳುಬೀಳುಗಳನ್ನು ಕಂಡು ಇದೀಗ ದಾಪುಗಾಲಿಟ್ಟು ಮುಂದುವರಿಯುತ್ತಿದೆ.
ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಸಂಘಟಿತವಾದ ಈ ಸಂಸ್ಥೆಯು 75 ವರ್ಷಗಳ ಕಾಲ ತನ್ನ ಚೈತನ್ಯವನ್ನು ಉಳಿಸಿಕೊಂಡು ಕ್ರಿಯಾಶೀಲವಾಗಿದೆ ಎಂದರೆ ಅದೇನೂ ಕಡಿಮೆಯ ಸಾಧನೆಯಲ್ಲ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಹಿರಿಯದು ಮತ್ತು ಮಹತ್ವದ್ದು ಎನಿಸಿರುವ ಸಂಘವು ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ.
ಇತಿಹಾಸ
ಆ ಕಾಲಕ್ಕೆ ಮಂಡ್ಯದ ಪ್ರಸಿದ್ಧ ನ್ಯಾಯವಾದಿಗಳೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶ್ರೀಯುತರುಗಳಾದ ಇಂಡುವಾಳು ಎಚ್.ಹೊನ್ನಯ್ಯ, ಎಂ.ಮಹಾಬಲರಾವ್, ಎಂ.ಎನ್.ಲಕ್ಷ್ಮೀನಾರಾಯಣರಾವ್, ಚಿ.ನಾ.ವಿಶ್ವನಾಥ ಶಾಸ್ತ್ರಿ, ಬಿ.ಎಸ್.ನಾಗಪ್ಪ, ಎಂ.ಕೆ.ಸಿಂಗ್ಲಾಚಾರ್, ಜಿ.ಚೆನ್ನಬಸಪ್ಪ, ಕೆ.ವಿ.ನಾರಾಯಣರಾವ್ ಇವರಿಂದ ಸಂಘವು ನೋಂದಾಯಿಸಲ್ಪಟ್ಟು ಅಸ್ತಿತ್ವಕ್ಕೆ ಬಂದಿತು.
ಮಂಡ್ಯ ಜಿಲ್ಲೆಯ ಹಿರಿಯ ಸಾಂಸ್ಕೃತಿಕ ನಾಯಕರ ಆಸಕ್ತಿಯಂತೆ ಸ್ವಾತಂತ್ರ್ಯ ಪೂರ್ವದಲ್ಲೇ ಮಂಡ್ಯ ನಗರದಲ್ಲಿ ಈ ಸಂಘವು ಸ್ಥಾಪನೆಯಾಯಿತು.
ಸಂಘವು ಅಧಿಕೃತವಾಗಿ 1946ರಲ್ಲಿ ನೋಂದಣಿಗೊಂಡು, ಇದೀಗ 75 ವರ್ಷಗಳನ್ನು ಪೂರೈಸಿ. ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.
ಸಂಘವು 1954ರಿಂದ ಪ್ರತಿವರ್ಷ ನಿರಂತರವಾಗಿ ಗಮಕವಾಚನ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ.
ಕಟ್ಟಡದ ಶಿಲಾನ್ಯಾಸವು ಕರ್ನಾಟಕ ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಡಿ.ಜತ್ತಿ ಅವರಿಂದ ನೆರವೇರಿದೆ.
ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ.ವೆಂಕಟಸುಬ್ಬಯ್ಯ ಅವರಿಂದ ಉದ್ಘಾಟನೆಯಾಗಿದೆ.
ಸಂಘದ ಕಟ್ಟಡದ ಎದುರಿಗಿನ ಖಾಲಿ ನಿವೇಶನದಲ್ಲಿ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ. ಶಿವರಾಮ ಕಾರಂತರು ರಂಗಮಂದಿರವನ್ನು ಉದ್ಘಾಟಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರವಾಗಿ ಮಾನ್ಯತೆ ಪಡೆದು ಸಂಶೋಧನಾ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿತು.
ಚಟುವಟಿಕೆಗಳು
ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಂಶೋಧನಾತ್ಮಕ ಕಾರ್ಯಗಳಲ್ಲಿ ಸಂಘದ ನಿರಂತರ ತೊಡಗಿಕೆ.
ಕರ್ನಾಟಕ ಸಂಘವು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕವಾಗಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ.
ಸಂಶೋಧನ ಕೇಂದ್ರಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಕರ್ನಾಟಕ ಸಂಘಕ್ಕೆ ಸಂಶೋಧನಾ ಕೇಂದ್ರದ ಮಾನ್ಯತೆ ನೀಡಿದೆ.
ಜನಪದ ಕಾರ್ಯಕ್ರಮಗಳುಕರ್ನಾಟಕ ಸಂಘವು ಮೂಲತಃ ಸಾಂಸ್ಕೃತಿಕ ಸಂಸ್ಥೆ. ಮಂಡ್ಯ ರಂಗಕಲೆಗೆ ಮೊದಲಿನಿಂದಲೂ ಪ್ರಸಿದ್ಧಿ ಪಡೆದಿದೆ.
ರಂಗ ಚಟುವಟಿಕೆಇಂದು ಗ್ರಂಥಾಲಯದಲ್ಲಿ 20 ಸಾವಿರದ ಹತ್ತಿರ ಗ್ರಂಥಗಳಿವೆ. ಕರ್ನಾಟಕ ಸಂಘವು ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ನೆರವಿನೊಂದಿಗೆ ಮಂಡ್ಯದ ಜನತೆಗಾಗಿ ವಾಚನಾಲಯವನ್ನು ತೆರೆದಿದೆ.
ಗ್ರಂಥಾಲಯ ಮತ್ತು ವಾಚನಾಲಯಕರ್ನಾಟಕ ಸಂಘವು ತನ್ನ ಪುನರುಜ್ಜೀವನದ ಸಮಯದಲ್ಲಿಯೇ ಪ್ರಕಟಣಾ ಕಾರ್ಯಕ್ಕೆ ಕೈ ಹಾಕಿರುವುದು ಒಂದು ಸಾಹಸದ ಹೆಜ್ಜೆ.
ಪ್ರಕಟಿತ ಗ್ರಂಥಗಳುಸಂಘವು ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಹೊಸ ದಿಗಂತವನ್ನೆ ತೆರೆದಿದೆ.
ಇತರ ಚಟುವಟಿಕೆಗಳುಗೌರವ
ಕರ್ನಾಟಕ ಸಂಘದ ಶಾಶ್ವತ ದತ್ತಿ ಮತ್ತು ಪ್ರಶಸ್ತಿ ಕಾರ್ಯಕ್ರಮಗಳು — ಒಟ್ಟು 22.
ರಂಗಮಂದಿರ
11-05-2023 · ಗುರುವಾರಕರ್ನಾಟಕ ರಂಗಮಂದಿರ ಶಿಲಾನ್ಯಾಸ ಸಮಾರಂಭ. 11-05-2023 ಗುರುವಾರ, ಸಂಜೆ : 400 ಗಂಟೆ. ಸ್ಥಳ: ಕರ್ನಾಟಕ ಸಂಘ® ಮಂಡ್ಯ
ಶ್ರೀ ನಾಗರಾಜಪ್ಪ ಅವರು ಅಧ್ಯಕ್ಷರಾಗಿದ್ದಾಗ, 1984 ರಲ್ಲಿ ಸಂಘದ ಕಟ್ಟಡದ ಎದುರಿಗಿನ ಖಾಲಿ ನಿವೇಶನದಲ್ಲಿ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ. ಕನ್ನಡದ ಖ್ಯಾತ ಕಾದಂಬರಿಕಾರ, ಹಲವು ಹವ್ಯಾಸಗಳ ಹರಿಕಾರ ಶಿವರಾಮ ಕಾರಂತರು ರಂಗಮಂದಿರವನ್ನು ಉದ್ಘಾಟಿಸಿದ್ದಾರೆ.
ರಂಗ ಚಟುವಟಿಕೆ ನೋಡಿಪ್ರೇರಣೆ
ಪಾರದರ್ಶಕತೆ
೨೦೧೧ರಿಂದ ಇಂದಿನವರೆಗಿನ ಸಂಘದ ಎಲ್ಲಾ ವಾರ್ಷಿಕ ವರದಿಗಳು.
ಅಭಿಪ್ರಾಯ
ಮಂಡ್ಯದ ಕರ್ನಾಟಕ ಸಂಘಕ್ಕೆ ಆರವತ್ತು ವರ್ಷಗಳ ದೀರ್ಘ ಇತಿಹಾಸವಿದೆ. ರಾಜ್ಯದ ಅತಿಹಳೆಯ ಸಂಘಗಳಲ್ಲಿ ಕೂಡ ಇದು ಒಂದಾಗಿದೆ. ಇದರ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಮಂಡ್ಯದ ಅನೇಕ ಪ್ರಮುಖರ ಪಾತ್ರವಿದೆ. ನಾಡಿನ ಹಲವಾರು ಹಿರಿಯ ಲೇಖಕರು ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ದಾಖಲೆಗಳಿವೆ. ಕುವೆಂಪು ಅವರಿಗೆ ಕೇಂದ್ರ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಅವರನ್ನು ಮೊದಲಿಗೆ ಸನ್ಮಾನಿಸಿದ ಹೆಗ್ಗಳಿಕೆ ಇದರದು. ಇಂತಹ ಹಿನ್ನೆಲೆಯಿರುವ ಸಂಘ ಇದೀಗ ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಹೊಸ ಚರಿತ್ರೆಯನ್ನು ಬರೆಯ ಹೊರಟಿದೆ. ಕಾರ್ಯದರ್ಶಿಯಾಗಿ ಪ್ರೊ. ಜಯಪ್ರಕಾಶಗೌಡರು ಪ್ರವೇಶಿಸುವುದರ ಮೂಲಕ ಸಂಘಕ್ಕೆ ಭೀಮಬಲ ಬಂದಂತಾಗಿದ್ದು, ಅನೇಕ ಕನಸುಗಳನ್ನು ನನಸು ಮಾಡುವುದರತ್ತ ದಾಪುಗಾಲು ಇಡುತ್ತಿದೆ. ಶಿಕ್ಷಣ ಕೋರ್ಸುಗಳು, ಸಂಶೋಧನ ಚಟುವಟಿಕೆಗಳು, ದತ್ತಿ ಉಪನ್ಯಾಸಗಳು, ಉನ್ನತ ವಿಚಾರ ಸಂಕಿರಣಗಳು, ಪುಸ್ತಕ ಪ್ರಕಟಣೆ, `ಮಂಡ್ಯ ಸಮಗ್ರ ದರ್ಶನ’ ರಚನೆ, `ಅಭಿವೃಕ್ತಿ’ ಸಾಹಿತ್ಯ ಮಾಸಿಕ ಪ್ರಕಾಶನ - ಹೀಗೆ ಹತ್ತು ಹಲವು ಆಯಾಮಗಳಿಂದ ಸಂಘ ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡಿದೆ. ಮಂಡ್ಯದ ಸಾಂಸ್ಕೃತಿಕ ವಲಯದಲ್ಲಿ ನೂತನ ಸಂಚಲನವನ್ನು ಸೃಷ್ಟಿಸಿರುವ ಕರ್ನಾಟಕ ಸಂಘ ಮುಂದೊಂದು ದಿನ ಮಹತ್ವದ ಸಂಸ್ಥೆಯಾಗಿ ಬೆಳೆಯುವ ಎಲ್ಲ ಸಲ್ಲಕ್ಷಣಗಳನ್ನು ತೋರಿದೆ.
ಕರ್ನಾಟಕ ಸಂಘ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಹೊಸ ದಿಗಂತವನ್ನೆ ತೆರೆದಿದ್ದು, ಈ ಎಲ್ಲ ಕಾರ್ಯಸಾಧನೆಗಳ ಕೀರ್ತಿ ಪ್ರೊ.ಜಯಪ್ರಕಾಶಗೌಡರಿಗೆ ಸಲ್ಲುತ್ತದೆ. ಅವರು ಈ ಎಲ್ಲದರ ಅಪ್ರತಿಮ ರೂವಾರಿ. ಅವರ ದೂರದರ್ಶಿತ್ವ, ಕಾರ್ಯತತ್ಪರತೆ, ಕರ್ತೃತ್ವಶಕ್ತಿ, ಕರ್ತವ್ಯ ನಿಷ್ಠೆ, ಪರಿಶ್ರಮ, ಪ್ರಾಮಾಣಿಕತೆ, ಪಾರದರ್ಶಕತೆಗಳು ಇವುಗಳ ಹಿನ್ನೆಲೆಯಲ್ಲಿವೆ. ಸಾರ್ವಜನಿಕ ಜೀವನದಲ್ಲಿ ಹೊಸ ಅಭಿರುಚಿಯ, ಭರವಸೆಯ ಬೆಳಕಾಗಿ ಕರ್ನಾಟಕ ಸಂಘವನ್ನು ಕಟ್ಟುವುದರಲ್ಲಿ ಅವರ ಪಾತ್ರ ಪ್ರಾಮುಖ್ಯದ್ದು, ಹಲವಾರು ಯೋಜನೆಗಳನ್ನು ಮುಂದಿರಿಸಿಕೊಂಡು ಉಪಯುಕ್ತವಾದ ಕೆಲಸವನ್ನು ಕರ್ನಾಟಕ ಸಂಘ ಇಂದು ಮಾಡುತ್ತಿದ್ದರೆ ಅದಕ್ಕೆ ಪ್ರೊ. ಜಯಪ್ರಕಾಶಗೌಡರ ನೇತೃತ್ವವೇ ಕಾರಣ. ಅವರು ಯಾವುದನ್ನೇ ಕೈಕೊಂಡರೂ ಅದಕ್ಕೊಂದು ಅರ್ಥವಿರುತ್ತದೆ. ಗುರಿಯಿರುತ್ತದೆ. ಕರ್ನಾಟಕ ಸಂಘವನ್ನು ಅರ್ಥಪೂರ್ಣವಾಗಿ ಕ್ರಿಯಾಶೀಲವಾಗಿ ಬೆಳೆಸಬೇಕೆಂಬ ಅವರ ಹಂಬಲ, ಅರ್ಪಣಾಭಾವ ನಿಜಕ್ಕೂ ಅಸದೃಶವಾದುದು. ಇದಕ್ಕೆ ಬೆಂಬಲವಾಗಿ ಕರ್ನಾಟಕ ಸಂಘದ ಎಲ್ಲ ಪದಾಧಿಕಾರಿಗಳೂ ಸಾಮೂಹಿಕವಾಗಿ ಬದ್ಧತೆಯಿಂದ ಕಾರ್ಯೋನ್ಮುಖವಾಗಿರುವುದು ಸ್ಪಷ್ಟವೇ ಇದೆ. ಕರ್ನಾಟಕ ಸಂಘದ ಸರ್ವ ಕಾರ್ಯಗಳಿಗೂ ರಚನಾತ್ಮಕವಾಗಿ ಮಂಡ್ಯದ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ಇರುವುದು ಸ್ಮರಣೀಯವಾದ ವಿಚಾರ.
ಕರ್ನಾಟಕ ಸಂಘ ಸೃಜನಶೀಲ ಮತ್ತು ಸಂಶೋಧನ ಕ್ಷೇತ್ರಗಳೆರಡನ್ನೂ ರಚನಾತ್ಮಕವಾಗಿ ಬೆಳೆಸಬೇಕೆಂಬ ಮಹದಾಶೆಯನ್ನು ಹೊಂದಿದೆ. ಅದಕ್ಕನುಗುಣವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಉದ್ದೇಶ ಅದರದು. ಯಾವುದೇ ಪಂಥ, ಸಿದ್ಧಾಂತಗಳಿಗೆ ಒಳಗಾಗದೆ ಮುಕ್ತ ಮನಸ್ಸಿನ ವೈಚಾರಿಕ ನೆಲೆಯ ಸಮಗ್ರ ಸಮದರ್ಶಿತ್ವದ ಕೈಂಕರ್ಯ ಅದರ ಧೋರಣೆ, ನಾಡು ನುಡಿಗೆ ಪ್ರಾಮಾಣಿಕವಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ಕರ್ನಾಟಕ ಸಂಘ ನಾಡಿನ ಗಮನವನ್ನು ಸೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ.
ವಿಡಿಯೊ
ಕರ್ನಾಟಕ ಸಂಘದ ಚಟುವಟಿಕೆಗಳ ಸಂಕ್ಷಿಪ್ತ ಪರಿಚಯವನ್ನು ವಿಡಿಯೊ ಮೂಲಕ ವೀಕ್ಷಿಸಿ.
ಸಂಪರ್ಕ