ಮುಖ್ಯ ವಿಷಯಕ್ಕೆ ಹೋಗಿ
ಅಕ್ಷರ ಗಾತ್ರ
ಕರ್ನಾಟಕ ಸಂಘ (ರಿ.), ಮಂಡ್ಯ — ಲಾಂಛನ ಕರ್ನಾಟಕ ಸಂಘ (ರಿ.), ಮಂಡ್ಯ ಸ್ಥಾಪನೆ ೧೯೩೩ · ನೋಂದಣಿ ೧೯೪೬

ದತ್ತಿ ಮತ್ತು ಪ್ರಶಸ್ತಿ

ದತ್ತಿಗಳ ವಿವರಗಳು

  1. ಮುಖಪುಟ
  2. ದತ್ತಿಗಳ ವಿವರಗಳು

ಕರ್ನಾಟಕ ಸಂಘ (ರಿ.), ಮಂಡ್ಯ

ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು

ಶ್ರೀಮತಿ ಕವಿತಾ ಸ್ಮಾರಕ ದತ್ತಿ

ಶ್ರೀಮತಿ ಕವಿತಾ ಸ್ಮಾರಕ ದತ್ತಿ

ದತ್ತಿಯ ಮೊಬಲಗು ರೂ. ಇಪ್ಪತ್ತೈದು ಸಾವಿರ; 2008ರ ಮೇ ತಿಂಗಳಿನಲ್ಲಿ ಈ ದತ್ತಿಯನ್ನು ಸ್ಥಾಪಿಸಲಾಗಿದೆ. ಕನ್ನಡದ ಹೆಸರಾಂತ ಜಾನಪದ ವಿದ್ವಾಂಸ ಕವಿ, ವಿಮರ್ಶಕ, ಸಂಸ್ಕೃತಿ ಚಿಂತಕ, ವಿಶ್ರಾಂತ ಪ್ರಾಧ್ಯಾಪಕರ ಡಾ. ರಾಮೇಗೌಡ(ರಾಗೌ) ಅವರು ಈ ದತ್ತಿಯನ್ನು ತಮ್ಮ ಮಗಳ ನೆನಪಿಗಾಗಿ ಸ್ಥಾಪಿಸಿದ್ದಾರೆ. ಪ್ರತಿವರ್ಷದ ಬುದ್ಧ ಪೂರ್ಣಿಮೆಯಂದು ಮಹಿಳಾ ಸಮಸ್ಯೆಯನ್ನು ಕುರಿತಂತೆ ದತ್ತಿ ಉಪನ್ಯಾಸ ಏರ್ಪಡಿಸಲಾಗುತ್ತದೆ. ಈ ಉಪನ್ಯಾಸವನ್ನು ಪುಸ್ತಕ ರೂಪದಲ್ಲಿ ಕರ್ನಾಟಕ ಸಂಘವು ಪ್ರಕಟಿಸುತ್ತಿದೆ.