ಹಸ್ತಪ್ರತಿ ಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಮಹಿಳಾ ಸರ್ಕಾರಿ ಪದವಿ ಕಾಲೇಜು ಮಂಡ್ಯ ಇವರ ಸಹಯೋಗದಲ್ಲಿ ೨೫ ರಿಂದ ೨೭ ರವರೆಗೆ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ’’ ಎಂಬ ಕಾರ್ಯಾಗಾರವನ್ನು ಏರ್ಪಡಿಲಾಗಿತ್ತು. ಹಿರಿಯ ವಿದ್ವಾಂಸರಾದ ಹ.ಕ.ರಾಜೇಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಬಿರದ ನಿರ್ದೇಶಕರಾದ ಡಾ.ಎಫ್.ಟಿ.ಹಳ್ಳಿಕೇರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರೆ, ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ್ ಬಡಿಗೇರರವರು ವಿಭಾಗದ ಪರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಹಾಗೂ ಶಂಕರಗೌಡ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಬಿ.ಶಂಕರಗೌಡರವರು ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಹಿ.ಚಿ.ಬೋರಲಿಂಗಯ್ಯನವರು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವಾಂಸರುಗಳಾದ ಹ.ಕ.ರಾಜೇಗೌಡ, ಬಿ.ಎಸ್.ಸಣ್ಣಯ್ಯ, ಶ್ರೀ ಬಿ.ಜಿ.ಮಂಜುನಾಥನ್, ಡಾ.ವೈ.ಸಿ.ಭಾನುಮತಿ, ಡಾ.ಬಿ.ನಂಜುಂಡಸ್ವಾಮಿ, ಡಾ.ವೀರೇಶ ಬಡಿಗೇರ, ಡಾ.ಎಫ್.ಟಿ.ಹಳ್ಳಿಕೇರಿ, ಡಾ. ಕೆ.ರವೀಂದ್ರನಾಥ್, ಡಾ.ವಿಜಯಲಕ್ಷ್ಮಿ ಕರಿಕಲ್ ಭಾಗವಹಿಸಿದ್ದರು. ೨೭-೦೪-೨೦೧೩ರಂದು ಶಿಬಿರದ ಸಮಾರೋಪ ಜರುಗಿ ಹಿರಿಯ ವಿದ್ವಾಂಸರಾದ ಬಿ.ಎಸ್.ಸಣ್ಣಯ್ಯನವರು ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡರು ಅಧ್ಯಕ್ಷತೆ ವಹಿಸಿದ್ದರು.
ಡಾ.ರಾಗೌ `ಸಮಗ್ರಕಾವ್ಯ’ ಬಿಡುಗಡೆ ಹಾಗೂ ವಿಚಾರ ಸಂಕಿರಣ ಸಮಾರಂಭವು ೩.೯.೨೦೧೩ರ ಮಂಗಳವಾರದಂದು ರಾಣಿ ಬಹದ್ದೂರ್ ಸಭಾಂಗಣ ಮಾನಸಗಂಗೋತ್ರಿ ಮೈಸೂರಿನಲ್ಲಿ ಜರುಗಿತು. ಹಂಪಿ. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯನವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಸಿದ್ಧ ಸಾಹಿತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪನವರು ಉದ್ಘಾಟನೆ ಹಾಗೂ ಕೃತಿ ಬಿಡುಗಡೆ ಮಾಡಿದರು.ಪ್ರೊ.ಚಂದ್ರಶೇಖರಯ್ಯನವರು ಉಪಸ್ಥಿತರಿದ್ದರು. ಕೃತಿ ಬಿಡುಗಡೆ ಮತ್ತು ಕೃತಿ ಕುರಿತು ಪ್ರಸಾರಾಂಗದ ನಿರ್ದೇಶಕರಾದ ಡಾ.ಸಿ.ನಾಗಣ್ಣನವರು ಮಾತನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಕೆ.ಎಸ್.ರಂಗಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಕೃತಿ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ ಸಮಾರೋಪ ಭಾಷಣ ಮಾಡಿದರು.
ಕರ್ನಾಟಕ ಸರ್ಕಾರದ ಕವಿಚಕ್ರವರ್ತಿ ರನ್ನ ಪ್ರತಿಷ್ಠಾನ ಮುಧೋಳ, ಕರ್ನಾಟಕ ಸಂಘ (ರಿ), ಮಂಡ್ಯ. ವಿಜಯ ಪ್ರಥಮ ದರ್ಜೆ ಕಾಲೇಜು ಪಾಂಡವಪುರ ಇವರ ಸಂಯುಕ್ತಾಶ್ರಯದಲ್ಲಿ ಕವಿ ಚಕ್ರವರ್ತಿ ರನ್ನ - ಕವಿಕಾವ್ಯ ಅನ್ವೇಷಣೆ ಕುರಿತು ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವು ಸೆಪ್ಪೆಂಬರ್ ೬ ಮತ್ತು ೭,೨೦೧೩ರಂದು ವಿಜಯ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಗ್ರಾಮ ವಿದ್ಯಾ ಪ್ರಚಾರ ಸಂಘದ ಗೌರವಕಾರ್ಯದರ್ಶಿಗಳಾದ ಶ್ರೀ ಕೆ.ವಿ.ಬಸವರಾಜುರವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕರಾದ ಡಾ.ರಾಗೌರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ವಿದ್ಯಾ ಪ್ರಚಾರ ಸಂಘದ ಅಧ್ಯಕ್ಷರಾದ ಶ್ರೀ ಎಚ್.ಗೌಡಯ್ಯ, ವಿಜಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ನಾರಾಯಣಗೌಡರು ಭಾಗವಹಿಸಿದ್ದರು. ಗೋಷ್ಠಿ ೧ರಲ್ಲಿ ರನ್ನ: ಜೀವನ ಮತ್ತು ಕಾಲ ಸಂದರ್ಭ ಎಂಬ ವಿಷಯದ ಬಗ್ಗೆ ಡಾ.ಎಸ್.ಡಿ.ಶಶಿಕಲಾ ಮೈಸೂರು, ಪ್ರಬಂಧ ಮಂಡಿಸಿದರು. ಗೋಷ್ಠಿ ೨ರಲ್ಲಿ ಸಾಹಸಭೀಮ ವಿಜಯ : ವಸ್ತು ವಿವೇಚನೆ ಬಗ್ಗೆ ಡಾ.ಭೈರಮಂಗಲ ರಾಮೇಗೌಡ ಬೆಂಗಳೂರು ಇವರು ಪ್ರಬಂಧ ಮಂಡಿಸಿದರೆ ಸಾಹಸಭೀಮ ವಿಜಯ : ಪ್ರೇರಣೆ ಮತ್ತು ಪ್ರಭಾವ ತೌಲನಿಕ ನೋಟ ಎಂಬ ವಿಷಯದ ಬಗ್ಗೆ ಡಾ.ಲಿಂಗರಾಜಯ್ಯ ಬೆಳಕೆರೆ ಬೆಂಗಳೂರು ಇವರು ಪ್ರಬಂಧ ಮಂಡಿಸಿದರು.
ದಿನಾಂಕ : ೦೭-೦೯-೨೦೧೩ರಂದು ಗೋಷ್ಠಿ ೨ರಲ್ಲಿ ಅಜಿತ ತೀರ್ಥಕರ ಪುರಾಣ : ವಸ್ತು - ಉದ್ದೇಶ ಎಂಬ ವಿಷಯದ ಬಗ್ಗೆ ಡಾ.ಎನ್.ಲೋಲಾಕ್ಷಿ ಮೈಸೂರು ಇವರು ಪ್ರಬಂಧ ಮಂಡಿಸಿದರು. ರನ್ನನ ಕಾವ್ಯಗಳು : ಸ್ತ್ರೀ ಪಾತ್ರಗಳು ಮತ್ತು ಸಂವೇದನೆ ಎಂಬ ವಿಷಯದ ಬಗ್ಗೆ ಡಾ.ಕವಿತಾ ರೈ ಮೈಸೂರು ಪ್ರಬಂಧ ಮಂಡಿಸಿದರು. ಗೋಷ್ಠಿ - ೪ ರಲ್ಲಿ ರನ್ನ ರನ್ನ : ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ ಎಂಬ ವಿಷಯದ ಬಗ್ಗೆ ಪ್ರೊ. ಎಂ.ಜಿ.ಚಂದ್ರಶೇಖರಯ್ಯ ದೊಡ್ಡಬಳ್ಳಾಪುರ ಇವರು ಪ್ರಬಂಧ ಮಂಡಿಸಿದರು. ರನ್ನ : ಅಭಿವ್ಯಕ್ತಿ ಎಂಬ ವಿಷಯದ ಬಗ್ಗೆ ಡಾ. ಎ.ರಂಗಸ್ವಾಮಿ ಮೈಸೂರು ಇವರು ಪ್ರಬಂಧ ಮಂಡಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ.ಎಸ್.ಪುಟ್ಟಣ್ಣಯ್ಯನವರು ವಹಿಸಿದ್ದರು. ಸಮಾರೋಪ ಭಾಷಣವನ್ನು ಡಾ.ಎಂ.ಎಚ್.ಕೃಷ್ಣಯ್ಯನವರು ಮಾಡಿದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರು ಗ್ರಾಮಪ್ರಚಾರ ವಿದ್ಯಾಸಂಘ ಪಾಂಡವಪುರದ ಶ್ರಿ ಪಟೇಲ ಬೋರೇಗೌಡ ಹಾಗೂ ಸಹ ಕಾರ್ಯದರ್ಶಿಗಳಾದ ಶ್ರೀ ಆರ್.ಪಿ.ಪ್ರಕಾಶ್ ಭಾಗವಹಿಸಿದ್ದರು.