fashion img

ಕಾರ್ಯಕ್ರಮಗಳ ವರದಿ

೨೦೧೭-೧೮ನೇ ಸಾಲಿನಲ್ಲಿ ನಡೆಸಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ

ದಿನಾಂಕ : ೦೧.೦೪.೨೦೧೭ ರಿಂದ ೩೧.೦೩.೨೦೧೮ರವರೆಗೆ ನಡೆಸಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಇಂತಿದೆ.

೧. ಎಂ. ಸಿದ್ಧರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ (೨೦೧೬-೧೭ನೇ ಸಾಲು) ದಿನಾಂಕ : ೦೧.೦೪. ೨೦೧೭ರ ಶನಿವಾರ ಸಂಜೆ ೬ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಜನತಾ ಶಿಕ್ಷಣ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎಚ್. ಹೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ನಾಗಮಂಗಲ ತಾಲ್ಲೂಕಿನ ಪಿ. ನೇರಲಕೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಸಹಶಿಕ್ಷಕರಾದ ಶ್ರೀ ಡಿ.ಎಂ. ಸೋಮೇಶಾರಾಧ್ಯ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸಿ.ಎಲ್. ನಂಜರಾಜ್ ಅವರು ಅಭಿನಂದನಾ ನುಡಿಗಳನ್ನಾಡಿದರು. ಮಂಡ್ಯ ಜಿಲ್ಲಾ ಪಂಚಾಯತಿಯ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಎಚ್.ಎನ್. ಯೋಗೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸದರಿ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಉಪನ್ಯಾಸಕರಾದ ಶ್ರೀ ಎಸ್. ಸುದೀಪ್‌ಕುಮಾರ್ ಅವರ ಉಪಸ್ಥಿತಿಯಿತ್ತು.

೨. ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಮತ್ತು ಡಾ. ರಾಗೌ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ದಿನಾಂಕ : ೧೧.೦೪.೨೦೧೭ರ ಮಂಗಳವಾರ ಸಂಜೆ ೬ ಗಂಟೆಗೆ ಮಾಜಿ ಶಾಸಕರಾದ ಶ್ರೀ ಎಂ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಹದಿನೈದು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುವ ಈ ಪ್ರಶಸ್ತಿಗಳಲ್ಲಿ ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು ಶ್ರೀ ಎನ್. ಜಗದೀಶ್‌ಕೊಪ್ಪ ಅವರಿಗೂ, ಡಾ. ರಾಗೌ ಸಾಹಿತ್ಯ ಪ್ರಶಸ್ತಿಯನ್ನು ಡಾ. ಎನ್.ಎಸ್. ತಾರಾನಾಥ ಅವರಿಗೂ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನುಬಳಿಗಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಸಂಘದ ಕ್ರಿಯಾಶೀಲತೆಯ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್.ಎಸ್. ಮುದ್ದೇಗೌಡ ಅವರು ಅಭಿನಂದನಾ ನುಡಿಗಳನ್ನಾಡಿದರು. ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ ಹಾಗೂ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ಜರುಗಿತು.

೩. ವಿಶ್ವಪುಸ್ತಕ ದಿನಾಚರಣೆ ದಿನಾಂಕ : ೨೩.೦೪.೨೦೧೭ರ ಭಾನುವಾರ ಬೆಳಿಗ್ಗೆ ೧೦.೩೦. ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ‘ವಿಶ್ವಪುಸ್ತಕ ದಿನಾಚರಣೆ' ಅಂಗವಾಗಿ ವಿಶೇಷ ಉಪನ್ಯಾಸ ಹಾಗೂ ಗಮಕವಾಚನ ಕಾರ್ಯಕ್ರಮ ಜರುಗಿತು. ‘ಪುಸ್ತಕ ಸಂಸ್ಕೃತಿ' ವಿಷಯವನ್ನು ಕುರಿತು ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್.ಬಿ. ಶಂಕರಗೌಡ ಅವರು ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಯು.ಎನ್. ಶಿವಣ್ಣಗೌಡ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

೪. ಬಡಗುತಿಟ್ಟು ಯಕ್ಷಗಾನ ತಾಳಮದ್ದಲೆ ‘ಶ್ರೀಕೃಷ್ಣ ಸಂಧಾನ' ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು ಇವರು ಪ್ರಾಯೋಜಿಸಿ ಕರ್ನಾಟಕ ಸಂಘ, ಮಂಡ್ಯ ಇವರು ಏರ್ಪಡಿಸಿ ಬೆಂಗಳೂರಿನ ಯಕ್ಷೇಷುದಿ ಕಲಾವಿದರು ಸಾದರಪಡಿಸಿದ ಬಡಗುತಿಟ್ಟು ಯಕ್ಷಗಾನ ತಾಳಮದ್ದಲೆ ‘ಶ್ರೀಕೃಷ್ಣ ಸಂಧಾನ' ಕಾರ್ಯಕ್ರಮವು ದಿನಾಂಕ : ೩೦.೦೪.೨೦೧೭ರ ಭಾನುವಾರ ಸಂಜೆ ೬.೩೦ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಜರುಗಿತು. ರಿಜಿಸ್ಟಾçರ್ ಶ್ರೀ ಎಸ್.ಎಚ್. ಶಿವರುದ್ರಪ್ಪ, ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕುವೆಂಪು ಅವರ ಎರಡು ನಾಟಕಗಳ ಮೂರು ದಿನಗಳ ಉತ್ಸವ ಕರ್ನಾಟಕ ಸಂಘ, ಮಂಡ್ಯ ಅರ್ಪಿಸಿ, ಸದ್ವಿದ್ಯಾ ರಂಗತAಡ ಅಭಿನಯಿಸಿದ ಕುವೆಂಪು ಅವರ ಎರಡು ನಾಟಕಗಳ ಮೂರು ದಿನಗಳ ಉತ್ಸವವು ದಿನಾಂಕ : ೦೧.೦೫.೨೦೧೭ ಹಾಗೂ ೦೨.೦೫.೨೦೧೭ರ ಸೋಮವಾರ ಮತ್ತು ಮಂಗಳವಾರದAದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ ೭ ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಪ್ರಾಯೋಜನೆಯಲ್ಲಿ ನೆರವೇರಿತು. ಶೂದ್ರತಪಸ್ವಿ ರಚನೆ : ಕುವೆಂಪು ನಿರ್ದೇಶನ ಮತ್ತು ರಂಗ ವಿನ್ಯಾಸ ಆನಂದ ತುಮಕೂರು ಜಲಗಾರ ರಚನೆ : ಕುವೆಂಪು, ನಿರ್ದೇಶನ ಮತ್ತು ರಂಗ ವಿನ್ಯಾಸ ಗಂಗಾಧರಸ್ವಾಮಿ ಮೈಸೂರು ಕುವೆಂಪು ನಾಟಕೋತ್ಸವ ಭಾರತರತ್ನ ಎಂ.ಎಸ್. ಸುಬ್ಬಲಕ್ಷಿö್ಮ ಲಲಿತಾಕಲಾ ವಿಭಾಗ ವಿವಿ ಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾಲಯ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಇವರ ಸಹಯೋಗದೊಂದಿಗೆ ಕರ್ನಾಟಕ ಸಂಘ, ಮಂಡ್ಯ ಇವರು ಏರ್ಪಡಿಸಿದ್ದ ಈ ಕಾರ್ಯಕ್ರಮ ದಿನಾಂಕ : ೦೧.೦೬.೧೭ ರಿಂದ ೦೩.೦೬.೧೭ ರವರೆಗೆ ತುಮಕೂರಿನ ಗುಬ್ಬಿ ವೀರಣ್ಣ ರಂಗಮAದಿರದಲ್ಲಿ ಪ್ರತಿದಿನ ಸಂಜೆ ೬ ಗಂಟೆಗೆ ಜರುಗಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದಿನಾಂಕ : ೦೧.೦೬.೨೦೧೭ರ ಗುರುವಾರ ಸಂಜೆ ೬ ಗಂಟೆಗೆ ನೆರವೇರಿತು. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಮುದ್ದುಹನುಮೇಗೌಡ ಅವರು ಉದ್ಘಾಟಿಸಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎ.ಎಚ್. ರಾಜಾಸಾಬ್ ಅವರು ಅಧ್ಯಕ್ಷತೆ ವಹಿಸಿದ್ದರು. ‘ಪಾದುಕಾ ಕಿರೀಟಿ', ‘ಜಲಗಾರ', ‘ಶೂದ್ರತಪಸ್ವಿ' ನಾಟಕಗಳನ್ನು ಮೂರು ದಿನ ಅನುಭವಿ ಕಲಾತಂಡಗಳಿAದ ಅಭಿನಯಿಸಲಾಯಿತು. ದಿನಾಂಕ : ೦೨.೦೬.೨೦೧೭ರ ಶುಕ್ರವಾರ ಸಂಜೆ ೬ ಗಂಟೆಗೆ ‘ಜಲಗಾರ' ನಾಟಕ ಅಭಿನಯದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರಿನ ಮಾಜಿ ಶಾಸಕರಾದ ಶ್ರೀ ಎಚ್. ನಾಗಪ್ಪ, ಜಿಲ್ಲಾ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಎಚ್. ನಿಂಗಯ್ಯ, ತುಮಕೂರು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ವೈ.ಎಚ್. ಹುಚ್ಚಯ್ಯ ಮೊದಲಾದವರು ಉಪಸ್ಥಿತರಿದ್ದರು. ದಿನಾಂಕ : ೦೩.೦೬.೨೦೧೭ರ ಶನಿವಾರ ಸಂಜೆ ೬ ಗಂಟೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಿತು. ತುಮಕೂರು ಆದಿಚುಂಚನಗಿರಿ ಶಾಖಾಮಠದ ಶ್ರೀಶ್ರೀ ಮಂಗಳನಾಥ ಸ್ವಾಮೀಜಿ ಅವರು ಉಪಸ್ಥಿತರಿದ್ದರು. ಕರ್ನಾಟಕ ವಿಧಾನಪರಿಷತ್ತಿನ ಶಾಸಕರಾದ ಶ್ರೀ ರಮೇಶ್‌ಬಾಬು ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮತ್ತೊಬ್ಬ ಶಾಸಕರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡರು, ತುಮಕೂರು ನಗರಪಾಲಿಕೆ ಪೂಜ್ಯ ಮಹಾಪೌರರಾದ ಶ್ರೀ ರವಿಕುಮಾರ್, ಉದ್ಯಮಿಗಳಾದ ಶ್ರೀ ಎನ್. ಗೋವಿಂದರಾಜು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೂರು ನಾಟಕಗಳು ಮನೋಜ್ಞ ಅಭಿನಯ ಕಂಡು ಜನಮನ ಸೂರೆಗೊಂಡವು.

೭. ರೈತರ ಜ್ವಲಂತ ಸಮಸ್ಯೆಗಳು ಮತ್ತು ಪರಿಹಾರ - ಒಂದು ದಿನದ ಚಿಂತನ - ಮಂಥನ ಕಾರ್ಯಕ್ರಮ ಭೂಮಿ ಬಳಗ ಟ್ರಸ್ಟ್, ಬೆಂಗಳೂರು, ಕರ್ನಾಟಕ ಸಂಘ ಮಂಡ್ಯ ಮತ್ತು ಕೃಷಿ ಸಂಶೋಧನಾ ಕೇಂದ್ರ, ವಿಸಿ ಫಾರಂ, ಕೃಷಿ ಇಲಾಖೆ ಮಂಡ್ಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೨೭.೦೮.೨೦೧೭ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಮಂಡ್ಯದ ರೈತಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಎಂ. ಕೃಷ್ಣಪ್ಪನವರ ಉದ್ಘಾಟನೆ ಹಾಗೂ ಕರ್ನಾಟಕ ವಿಧಾನಪರಿಷತ್ತಿನ ಶಾಸಕರಾದ ಮಾನ್ಯ ಶ್ರೀ ಕೆ.ಟಿ. ಶ್ರೀಕಂಠೇಗೌಡರ ಅಧ್ಯಕ್ಷತೆಯಲ್ಲಿ ನೆರವೇರಿತು. ನಿವೃತ್ತ ಉಪಕುಲಪತಿಗಳಾದ ಡಾ. ನಾರಾಯಣಗೌಡ, ಮನಶಾಸ್ತçಜ್ಞರಾದ ಡಾ. ಜಗದೀಶ್, ಕೃಷಿ ವಿವಿ ಡೀನ್ ಡಾ. ಶಿವಶಂಕರ್, ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಟಿ. ತಿಮ್ಮೇಗೌಡ, ಪ್ರೇರಕ ಭಾಷಣಕಾರರಾದ ಶ್ರೀ ಚೇತನ್‌ರಾಮ್, ಭೂಮಿ ಬಳಗ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಜಿ.ಎಸ್. ನಾರಾಯಣಸ್ವಾಮಿ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರಂತರ ಸಂಕಷ್ಟದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣು ಹೋಗುತ್ತಿರುವ ಜಿಲ್ಲೆಯ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ, ಬದುಕಿನಲ್ಲಿ ಉತ್ಸಾಹ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಯಿತು.

೮. ಗಾಂಧಿವಾದಿ ಬಿ.ಎಚ್. ಮಂಗೇಗೌಡ ಶಿಕ್ಷಕ ಮತ್ತು ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ : ೦೨.೧೦.೨೦೧೭ರ ಸೋಮವಾರ ಸಂಜೆ ೬ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ನೆರವೇರಿತು. ಹುಲಿಕೆರೆ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ಶ್ರೀಮತಿ ಡಿಲ್ಲಿಸ್ ಮೆರಿನಾ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು, ಗೂಳೂರುದೊಡ್ಡಿ ಪ್ರಗತಿಪರ ರೈತ ಶ್ರೀ ಸಿ.ಪಿ. ಕೃಷ್ಣ ಅವರಿಗೆ ಉತ್ತಮ ಕೃಷಿಕ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಮಂಡ್ಯ ಸಂಸದರಾದ ಶ್ರೀ ಸಿ.ಎಸ್. ಪುಟ್ಟರಾಜು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡ ಅವರು ಮುಖ್ಯ ಅತಿಥಿಗಳಾಗಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತೊಬ್ಬ ವಿಧಾನಪರಿಷತ್ತಿನ ಶಾಸಕರಾದ ಶ್ರೀ ಎನ್. ಅಪ್ಪಾಜಿಗೌಡ ಅವರು ವಹಿಸಿದ್ದರು. ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

೯. ವೈ.ಕೆ. ರಾಮಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮಂಡ್ಯದ ರೈತಸಭಾಂಗಣದಲ್ಲಿ ದಿನಾಂಕ : ೨೯.೧೦.೨೦೧೭ರ ಭಾನುವಾರ ಸಂಜೆ ೪ ಗಂಟೆಗೆ ಸಂಸದರಾದ ಶ್ರೀ ಸಿ.ಎಸ್. ಪುಟ್ಟರಾಜುರವರ ಅಧ್ಯಕ್ಷತೆಯಲ್ಲಿ ನೆರವೇರಿತು. ವೈ.ಕೆ. ರಾಮಯ್ಯ ರೇಷ್ಮೆ ತಜ್ಞ ಪ್ರಶಸ್ತಿಯನ್ನು ಡಾ. ಎಚ್.ಕೆ. ಬಸವರಾಜ, ತರಿಕೆರೆ ಅವರಿಗೂ ಹಾಗೂ ವೈ.ಕೆ. ರಾಮಯ್ಯ ರೇಷ್ಮೆ ಕೃಷಿ ಪ್ರಶಸ್ತಿಯನ್ನು ಶ್ರೀ ಕೆ. ಚಂದ್ರಶೇಖರ, ಮಂಡ್ಯ ಅವರಿಗೂ ಪ್ರದಾನ ಮಾಡಲಾಯಿತು. ವೈ.ಕೆ. ರಾಮಯ್ಯನವರ ಸ್ಮರಣೆಯ ನುಡಿಗಳನ್ನು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಎಚ್.ಎಸ್. ಮುದ್ದೇಗೌಡ ಅವರು ನುಡಿದರು. ಉಪಸಭಾಪತಿಗಳಾದ ಶ್ರೀ ಮರಿತಿಬ್ಬೇಗೌಡರು ಪ್ರಶಸ್ತಿ ಪ್ರದಾನ ಮಾಡಿದರು. ವಿಧಾನಪರಿಷತ್ತಿನ ಶಾಸಕರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡ ಹಾಗೂ ಶ್ರೀ ಎನ್ ಅಪ್ಪಾಜಿಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಪ್ರಧಾನ ಪೋಷಕರೂ, ಮಾಜಿ ಶಾಸಕರೂ ಆದ ಶ್ರೀ ಎಂ. ಶ್ರೀನಿವಾಸ್ ಹಾಗೂ ವೈ.ಕೆ. ರಾಮಯ್ಯ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎನ್.ಆರ್. ರಂಗಯ್ಯ ಅವರ ಗೌರವ ಉಪಸ್ಥಿತಿ ಇತ್ತು. ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಶ್ರೀ ಎಂ.ಎ. ಖಾನ್ ಅವರು ಅಭಿನಂದನಾ ನುಡಿಗಳನ್ನಾಡಿದರು.

೧೦. ಸಿದ್ದಯ್ಯನಕೊಪ್ಪಲು ನಂಜಯ್ಯ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಕರ್ನಾಟಕ ಸಂಘದ ಆವರಣದಲ್ಲಿ ದಿನಾಂಕ : ೦೫.೧೧.೨೦೧೭ರ ಭಾನುವಾರ ಸಂಜೆ ೪ ಗಂಟೆಗೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರೂ, ನಿವೃತ್ತ ಐಎಎಸ್ ಅಧಿಕಾರಿಗಳೂ ಆದ ಶ್ರೀ ಟಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಜರುಗಿತು. ಮೇಲುಕೋಟೆ ಶಾಸಕರಾದ ಶ್ರೀ ಕೆ.ಎಸ್. ಪುಟ್ಟಣ್ಣಯ್ಯನವರು ಪ್ರಶಸ್ತಿ ಪ್ರದಾನ ಮಾಡಿದರು. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಿ.ಪಿ. ಸ್ವಾಮಿ ಅವರು ಅಭಿನಂದನಾ ನುಡಿಗಳನ್ನಾಡಿದರು. ಶಿವಳ್ಳಿಯ ಸಾವಯವ ಕೃಷಿಕರಾದ ಶ್ರೀ ಬೋರೇಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ದಯ್ಯನಕೊಪ್ಪಲಿನ ನಿವೃತ್ತ ಜಿಲ್ಲಾಧಿಕಾರಿಗಳಾದ ಶ್ರೀ ಎಸ್.ಎನ್. ನಾಗರಾಜು ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

೧೧. ಯಕ್ಷಗಾನ ರಸೋಲ್ಲಾಸ ಕರ್ನಾಟಕ ಸಂಘ ಹಾಗೂ ಸದ್ವಿದ್ಯಾ ಶಾಲೆ, ಮಂಡ್ಯ ಇವರು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ದಿನಾಂಕ : ೨೧.೧೧.೨೦೧೭ರ ಮಂಗಳವಾರ ಸಂಜೆ ೭ ಗಂಟೆಗೆ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮAದಿರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಟಿ. ತಿಮ್ಮೇಗೌಡ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಮಾನ್ಯ ಎನ್. ಮಂಜುಶ್ರೀ ಅವರ ಉಪಸ್ಥಿತಿಯೊಂದಿಗೆ ನಡೆಯಿತು. ಸದ್ವಿದ್ಯಾ ಶಾಲೆಯ ಯುವಪ್ರತಿಭೆಗಳು ನವರಸಗಳ ಭಾವಾಭಿನಯ ರೂಪಕವನ್ನು ರಸತುಂಬಿ ಅಭಿನಯಿಸಿದರು. ಸದ್ವಿದ್ಯಾ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಂ.ಕೆ. ಹರೀಶ್‌ಕುಮಾರ್ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡರ ಸಂಘಟನೆಯಲ್ಲಿ ಸೊಗಸಾದ ಪ್ರದರ್ಶನ ಕಂಡಿತು.

೧೨. ಮಂಡ್ಯ ಜಿಲ್ಲಾ ಉತ್ಸವ : ದೆಹಲಿ ಕರ್ನಾಟಕ ಸಂಘದ ಸಹಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ನೆರವಿನೊಂದಿಗೆ ದೆಹಲಿಯ ಕರ್ನಾಟಕ ಸಂಘದಲ್ಲಿ ೨೦೧೭ರ ಡಿಸೆಂಬರ್ ೯,೧೦ ರಂದು ಕಾರ್ಯಕ್ರಮ ನೆರವೇರಿತು. ದಿನಾಂಕ : ೦೯.೧೨.೨೦೧೭ರ ಬೆಳಿಗ್ಗೆ ೧೦.೩೦ ಗಂಟೆಗೆ ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಎಚ್.ಡಿ. ದೇವೇಗೌಡರ ಉದ್ಘಾಟನೆ, ಮಾನ್ಯ ಸಂಸದರಾದ ಶ್ರೀ ಸಿ.ಎಸ್. ಪುಟ್ಟರಾಜು ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಿತು. ಮಾನ್ಯ ಉಪಸಭಾಪತಿಗಳಾದ ಶ್ರೀ ಮರಿತಿಬ್ಬೇಗೌಡ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ರಾಜ್ಯಸಭಾ ಸದಸ್ಯರಾದ ಶ್ರೀ ಕುಪೇಂದ್ರರೆಡ್ಡಿ , ಶಾಸಕರಾದ ಶ್ರೀ ಡಿ.ಸಿ. ತಮ್ಮಣ್ಣ, ಶ್ರೀ ಕೆ.ಸಿ. ನಾರಾಯಣಗೌಡ, ಶ್ರೀ ಕೆ.ಟಿ. ಶ್ರೀಕಂಠೇಗೌಡ ಹಾಗೂ ಮಾಜಿ ಶಾಸಕರಾದ ಶ್ರೀ ಎಂ. ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿದ್ದರು. ಮಧ್ಯಾಹ್ನ ೧೨ ಗಂಟೆಗೆ ವಿಚಾರಗೋಷ್ಠಿ ಪ್ರಾರಂಭಗೊಂಡು ‘ಮಂಡ್ಯ ಜಿಲ್ಲಾ ರಾಜಕಾರಣ ಮತ್ತು ಅಭಿವೃದ್ಧಿ' ವಿಷಯವನ್ನು ಕುರಿತಂತೆ ವಿಧಾನಪರಿಷತ್ತಿನ ಶಾಸಕರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡರು ಹಾಗೂ ‘ಮಂಡ್ಯ ಜಿಲ್ಲೆ - ಸಂಸ್ಕೃತಿ' ವಿಷಯವನ್ನು ಕುರಿತಂತೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಎಚ್.ಎಸ್. ಮುದ್ದೇಗೌಡ ವಿಚಾರ ಮಂಡನೆ ಮಾಡಿದರು. ಭೋಜನ ವಿರಾಮದ ನಂತರ ಸಂಘದ ನಿರ್ದೇಶಕರಾದ ಶ್ರೀ ಎಚ್.ಕೆ. ಚಂದ್ರಹಾಸ್, ಕು. ದಿಶಾಜೈನ್, ಕು. ನಿತ್ಯಶ್ರೀ ಮತ್ತು ತಂಡದ ಕಲಾವಿದರು ಭಾವಗೀತಾ ಗಾಯನವನ್ನು ಪ್ರಸ್ತುತಪಡಿಸಿದರು. ಸಂಜೆ ೪ ಗಂಟೆಗೆ ಶ್ರೀ ಕೆ.ವಿ. ಶಂಕರಗೌಡರು ರಚಿಸಿರುವ ‘ಪಾದುಕಾ ಕಿರೀಟಿ' ನಾಟಕವನ್ನು ಶ್ರೀ ಗಂಗಾಧರಸ್ವಾಮಿಯವರ ನಿರ್ದೇಶನದಲ್ಲಿ ನುರಿತ ಕಲಾವಿದರ ತಂಡದಿAದ ಮನೋಜ್ಞವಾಗಿ ಪ್ರದರ್ಶಿಸಲಾಯಿತು. ದಿನಾಂಕ : ೧೦.೧೨.೨೦೧೭ರ ಬೆಳಿಗ್ಗೆ ೧೦.೩೦ ಗಂಟೆಗೆ ವಿಚಾರಗೋಷ್ಠಿ ಪ್ರಾರಂಭಗೊಂಡು ‘ಮಂಡ್ಯ ಜಿಲ್ಲೆ : ಸಾಹಿತ್ಯ ಮತ್ತು ಶಿಕ್ಷಣ' ವಿಷಯವಾಗಿ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ ಅವರು ವಿಚಾರ ಮಂಡನೆ ಮಾಡಿದರು. ಬೆಳಿಗ್ಗೆ ೧೧.೩೦ ಗಂಟೆಗೆ ಕುವೆಂಪು ಅವರ ‘ಜಲಗಾರ' ನಾಟಕವನ್ನು ಶ್ರೀ ಗಂಗಾಧರಸ್ವಾಮಿ ಅವರ ಅತ್ಯದ್ಭುತ ನಿರ್ದೇಶನದಲ್ಲಿ ಸದ್ವಿದ್ಯಾ ತಂಡದವರು ಪಾತ್ರಗಳೇ ತಾವಾಗಿ ಅಮೋಘ ಪ್ರದರ್ಶನ ನೀಡಿ ಜನ ಮೆಚ್ಚುಗೆಗೆ ಪಾತ್ರರಾದರು. ಮಧ್ಯಾಹ್ನ ೧ ಗಂಟೆಗೆ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಕೆಂಚೇಗೌಡ ಕಾಳೇನಹಳ್ಳಿ, ಶ್ರೀ ಸುರೇಶ್ ಕಾರಸವಾಡಿ, ಶ್ರೀ ಪುಟ್ಟರಾಜು ಹೊಸ್ಕೆರೆ ಅವರು ರಂಗಗೀತೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಧ್ಯಾಹ್ನ ೨.೪೫ ಗಂಟೆಗೆ ಶ್ರೀ ಹುರುಗಲವಾಡಿ ರಾಮಯ್ಯ, ಶ್ರೀಮತಿ ಮಂಜುಳಾ, ಕು. ದಿಶಾಜೈನ್, ಶ್ರೀ ಎಚ್.ಕೆ. ಚಂದ್ರಹಾಸ್ ಅವರ ತಂಡದವರು ಜಾನಪದ ಗೀತಾಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಜೆ ೪ ಗಂಟೆಗೆ ಕುವೆಂಪು ಅವರ ಹಳಗನ್ನಡ ನಾಟಕ ‘ಶೂದ್ರತಪಸ್ವಿ'ಯನ್ನು ಆನಂದ ತುಮಕೂರು ಅವರ ನಿರ್ದೇಶನದಲ್ಲಿ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟ, ಮಂಡ್ಯ ಇವರು ಪ್ರಸ್ತುತ ಪಡಿಸಿದರು. ಸಂಜೆ ೬ ಗಂಟೆಗೆ ಜರುಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾನ್ಯ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಂ. ಕೃಷ್ಣಪ್ಪ ಅವರು ವಹಿಸಿದ್ದರು. ತುಮಕೂರು ಸಂಸದರಾದ ಶ್ರೀ ಎಸ್.ಪಿ. ಮುದ್ದುಹನುಮೇಗೌಡ ಅವರು ಸಮಾರೋಪ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳೂ ಆದ ಮಾನ್ಯ ಎಚ್.ಎನ್. ನಾಗಮೋಹನ್‌ದಾಸ್ ಅವರು ಸನ್ಮಾನಿಸಿದರು. ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಸಿ.ಎಂ. ನಾಗರಾಜು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

೧೩. ಶ್ರೀ ರಾಮಾಯಣದರ್ಶನಂ ಗಮಕ ಸಪ್ತಾಹ : ಕುವೆಂಪು ಜನ್ಮೋತ್ಸವ ಸಮಾರಂಭ ದಿನಾಂಕ : ೨೨.೧೨.೨೦೧೭ರಿಂದ ೨೯.೧೨.೨೦೧೭ರವರೆಗೆ ಏಳುದಿನಗಳ ಕಾಲ ಪ್ರತಿದಿನ ಸಂಜೆ ಕರ್ನಾಟಕ ಸಂಘದ ಆವರಣದಲ್ಲಿ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಆಯ್ದ ಭಾಗಗಳ ಗಮಕ ವಾಚನ - ವ್ಯಾಖ್ಯಾನವನ್ನು ನಾಡಿನ ಖ್ಯಾತ ಕಲಾವಿದರಿಂದ ಮಾಡಿಸಲಾಯಿತು. ಈ ಅನನ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಕಲಾಶ್ರೀ ಎಂ.ಆರ್. ಸತ್ಯನಾರಾಯಣ ಅವರು ನೆರವೇರಿಸಿಕೊಟ್ಟರು. ಪ್ರೊ. ಜಯಪ್ರಕಾಶಗೌಡರು ಅಧ್ಯಕ್ಷತೆ ವಹಿಸಿದ್ದರು. ಮೊದಲದಿನ ‘ಓ ಲಕ್ಷ್ಮಣಾ' ಕಾವ್ಯಭಾಗದ ವಾಚನವನ್ನು ಶ್ರೀಮತಿ ಸುಧಾ, ಬೆಂಗಳೂರು ಅವರು, ವ್ಯಾಖ್ಯಾನವನ್ನು ಶ್ರೀಮತಿ ಮಂಜುಳಾ ರವಿಶಂಕರ್, ತುಮಕೂರು ಅವರು ನೀಡಿದರು. ಎರಡನೇ ದಿನ ‘ಶಬರಿಗಾದನು ಅತಿಥಿ ದಾಶರಥಿ' ಎಂಬ ಕಾವ್ಯಭಾಗವನ್ನು ಶ್ರೀ ವಿದ್ಯಾಶಂಕರ್ ಮಂಡ್ಯ, ಇವರು ವಾಚಿಸಿದರೆ ಡಾ. ಮ. ರಾಮಕೃಷ್ಣ ಮಂಡ್ಯ, ಇವರು ವ್ಯಾಖ್ಯಾನಿಸಿದರು. ಮೂರನೇ ದಿನ ‘ನೀ ಸತ್ಯವ್ರತನೆ ದಿಟಂ' ಎಂಬ ಕಾವ್ಯಭಾಗವನ್ನು ಶ್ರೀಮತಿ ರಾಜಶ್ರೀ ಬೆಂಗಳೂರು ಇವರು ವಾಚಿಸಿದರು, ಡಾ. ಬಿ.ವಿ. ವಸಂತಕುಮಾರ್ ಮೈಸೂರು, ಇವರು ವ್ಯಾಖ್ಯಾನಿಸಿದರು. ನಾಲ್ಕನೇ ದಿನ ‘ಸಂಸ್ಕೃತಿ ಕಲಾ' ಕಾವ್ಯಭಾಗದ ಗಮಕ ವಾಚನವನ್ನು ಶ್ರೀ ಎಂ.ಆರ್. ಬದರಿಪ್ರಸಾದ್ ಬೆಂಗಳೂರು ನೆರವೇರಿಸಿದರು. ಡಾ. ಬೋರೇಗೌಡ ಚಿಕ್ಕಮರಳಿ ಅವರು ವ್ಯಾಖ್ಯಾನಿಸಿದರು. ಐದನೆ ದಿನ ‘ಸುಗ್ರಿವಾಜ್ಞೆ' ಎಂಬ ಆಯ್ದ ಭಾಗವನ್ನು ಶ್ರೀಮತಿ ಸತ್ಯಲಕ್ಷಿö್ಮ ಮೈಸೂರು, ಇವರು ವಾಚಿಸಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮೈಸೂರು ಇವರು ವ್ಯಾಖ್ಯಾನಿಸಿದರು. ಆರು ಮತ್ತು ಏಳನೇ ದಿನದ ಕಾರ್ಯಕ್ರಮದಲ್ಲಿ ‘ಸಾಗರೋಲ್ಲಂಘನ' ಹಾಗೂ ‘ದಶಶಿರ ಕನಕಲಕ್ಷಿö್ಮ' ಕಾವ್ಯ ಭಾಗವನ್ನು ಬೆಂಗಳೂರಿನ ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನದವರು ಗಮಕ ವಾಚನ ಮಾಡಿ ವ್ಯಾಖ್ಯಾನಿಸಿದರು. ದಿನಾಂಕ : ೨೮.೧೨.೨೦೧೭ನೇ ಗುರುವಾರ ಸಮಾರೋಪ ಸಮಾರಂಭ ಜರುಗಿ ಸಾಹಿತಿ ಶ್ರೀ ತೈಲೂರು ವೆಂಕಟಕೃಷ್ಣ ಅವರು ಸಮಾರೋಪ ನುಡಿಗಳನ್ನು ನುಡಿದರು. ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಶ್ರೀ ತಗ್ಗಹಳ್ಳಿ ವೆಂಕಟೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ದಿನಾಂಕ : ೨೯.೧೨.೨೦೧೭ನೇ ಶುಕ್ರವಾರ ಸಂಜೆ ೬ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಕುವೆಂಪು ಜನ್ಮೋತ್ಸವ ಸಮಾರಂಭ ಸಾಹಿತಿಗಳಾದ ಡಾ. ಎಚ್.ಎಸ್. ಮುದ್ದೇಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಕುವೆಂಪು ಕುರಿತು ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್.ಡಿ. ಉಮಾಶಂಕರ್ ಮಾತನಾಡಿದರು. ಸಂಜೆ ೬.೩೦ಕ್ಕೆ ಶ್ರೀ ಎಚ್.ಕೆ. ಚಂದ್ರಹಾಸ್ ನೇತೃತ್ವದಲ್ಲಿ ಕುವೆಂಪು ಗೀತಗಾಯನ ನಡೆಯಿತು.

೧೪. ಕುವೆಂಪು ವಿಶ್ವಮಾನವ ಸಂದೇಶ ಕಲಾಜಾತ ಮತ್ತು ಉಪನ್ಯಾಸ ಕಾರ್ಯಕ್ರಮ ದಿನಾಂಕ : ೦೮.೦೧.೨೦೧೮ನೇ ಸೋಮವಾರ ಸಂಜೆ ೬ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಸದರಿ ಕಾರ್ಯಕ್ರಮ ನೆರವೇರಿತು. ಮಾನವ ಬಂಧುತ್ವ ವೇದಿಕೆ ಕರ್ನಾಟಕ - ಕರ್ನಾಟಕ ಸಂಘ, ಮಂಡ್ಯ - ಜನದನಿ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಜರುಗಿದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಲಿತ ಚಳುವಳಿಯ ಮುಖಂಡರಾದ ಪ್ರೊ. ಬಿ.ಎಸ್. ಚಂದ್ರಶೇಖರ್ ನೆರವೇರಿಸಿದರೆ ಜನದನಿ ಸಾಂಸ್ಕೃತಿಕ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಕೆ. ಜಯರಾಮ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಶ್ರೀ ವಿಲ್ಫೆçÃಡ್ ಡಿಸೋಜ ಅವರು ಅತಿಥಿಗಳಾಗಿದ್ದ ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಬೋರೇಗೌಡ ಚಿಕ್ಕಮರಳಿ ಪ್ರಧಾನ ಉಪನ್ಯಾಸ ನೀಡಿದರು.

೧೪. ಎಂ. ಸಿದ್ಧರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ (೨೦೧೭-೧೮ನೇ ಸಾಲು) ದಿನಾಂಕ : ೨೬.೦೨.೧೦೧೮ನೇ ಸೋಮವಾರ ಸಂಜೆ ೬ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡರ ಅಧ್ಯಕ್ಷತೆಯಲ್ಲಿ ನೆರವೇರಿತು. ಹೆಬ್ಬಕವಾಡಿ ಸರ್ಕಾರಿ ಪ್ರೌಢಶಾಲಾ ಗಣಿತ ಸಹಶಿಕ್ಷಕರಾದ ಶ್ರೀ ಸಿ. ಶಿವರಾಮು ಅವರಿಗೆ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಪ್ರಸಿದ್ಧ ಅಂಕಣಕಾರರಾದ ಶ್ರೀ ಎಸ್. ಷಡಕ್ಷರಿ ಪ್ರಶಸ್ತಿ ಪ್ರದಾನ ಮಾಡಿದರು. ಎಲೆಚಾಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಡಾ. ಎಸ್.ಸಿ. ಮಂಗಳ ಅಭಿನಂದನಾ ನುಡಿಗಳನ್ನು ನುಡಿದರು. ಸಂಘದಲ್ಲಿ ನೂತನವಾಗಿ ದತ್ತಿನಿಧಿ ಸ್ಥಾಪಿಸಿರುವ ದತ್ತಿದಾನಿಗಳಾದ ಶ್ರೀಮತಿ ಎಸ್. ಗುಣಸಾಗರಿ, ಶ್ರೀ ನಾಗರಾಜು ಹಾಗೂ ಇಂಗ್ಲಿಷ್ ಉಪನ್ಯಾಸಕರಾದ ಶ್ರೀ ಎಸ್. ಸುದೀಪ್‌ಕುಮಾರ್ ಅವರ ಗೌರವ ಉಪಸ್ಥಿತಿಯಿತ್ತು.

೧೫. ೫ನೇ ವರ್ಷದ ಡಾ. ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭ ಮಂಡ್ಯದ ರೈತ ಸಭಾಂಗಣದಲ್ಲಿ ದಿನಾಂಕ : ೦೫.೦೨.೨೦೧೮ನೇ ಸೋಮವಾರ ಸಂಜೆ ೬ ಗಂಟೆಗೆ ಮಾಜಿ ವಿಧಾನಪರಿಷತ್ ಸದಸ್ಯರಾದ ಎಚ್. ಹೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಅಂಕಣ ಬರಹದ ಹಿರಿಯರಿಗೆ ನೀಡುವ ಪ್ರಶಸ್ತಿಯನ್ನು ಮೈಸೂರಿನ ಸಂಸದರಾದ ಸನ್ಮಾನ್ಯ ಪ್ರತಾಪಸಿಂಹ ಅವರಿಗೂ, ಅಂಕಣ ಬರಹದ ಯುವಕರಿಗೆ ನೀಡುವ ಪ್ರಶಸ್ತಿಯನ್ನು ಸನ್ಮಾನ್ಯ ಪಿ. ಕುಸುಮ ಅವರಿಗೂ ಕೊಡಮಾಡಲಾಯಿತು. ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಸನ್ಮಾನ್ಯ ವಿಶ್ವೇಶ್ವರಭಟ್ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದನಾ ನುಡಿಗಳನ್ನು ನುಡಿದರು. ಈ ಕಾರ್ಯಕ್ರಮ ಪ್ರಾರಂಭದ ಪೂರ್ವಭಾವಿಯಾಗಿ ಶ್ರೀ ಸಿದ್ಧರಾಜು ಹೊನಗಳ್ಳಿ ಮತ್ತು ತಂಡದವರು ಜನಪದಗೀತೆಗಳ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

೧೬. ಎಂ. ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಕರ್ನಾಟಕ ಸಂಘದ ಆವರಣದಲ್ಲಿ ದಿನಾಂಕ : ೧೪.೦೩.೨೦೧೮ರ ಬುಧವಾರ ಸಂಜೆ ೬.೩೦ ಗಂಟೆಗೆ ಮಾಜಿ ಶಾಸಕರಾದ ಶ್ರೀ ಎಂ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸದರಿ ಕಾರ್ಯಕ್ರಮ ನೆರವೇರಿತು. ಆಯುಷ್ ವೈದ್ಯಾಧಿಕಾರಿಗಳಾದ ಡಾ. ಎಚ್.ಪಿ. ಚಂದ್ರಶೇಖರ್ ಅವರಿಗೆ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಮಾನ್ಯ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಕೆ.ಎಸ್. ನಂದಿನಿ ಜಯರಾಮ್ ಅವರು ತಮ್ಮ ಅಭಿನಂದನಾ ನುಡಿಗಳಲ್ಲಿ ವೈದ್ಯರ ನಿಸ್ಪೃಹ ಸೇವೆಯನ್ನು ಜನಮನ ಮುಟ್ಟುವಂತೆ ಮನವರಿಕೆ ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಶ್ರೀ ಎನ್. ಜಯರಾಮ್ ಕೀಲಾರ ಅವರು ಮುಖ್ಯ ಅತಿಥಿಗಳಾಗಿದ್ದರು. ದತ್ತಿನಿಧಿ ಸ್ಥಾಪಕರಾದ ಶ್ರೀಮತಿ ಎಂ.ಕೆ. ಲಕ್ಷ್ಮಿ ಕೋಂ ಎಂ. ಶಿವಲಿಂಗಯ್ಯನವರು ಉಪಸ್ಥಿತರಿದ್ದರು.