ಮಂಡ್ಯದ ಹೊಸಹಳ್ಳಿಯ ಶ್ರೀಮತಿ ಎಂ.ಕೆ. ಲಕ್ಷ್ಮೀ ಅವರು ತಮ್ಮ ಪತಿ ಹೊಸಹಳ್ಳಿಯ ಎಂ. ಶಿವಲಿಂಗಯ್ಯ ಅವರ ಹೆಸರಿನಲ್ಲಿ ದತ್ತಿಯೊಂದನ್ನು ಸ್ಥಾಪಿಸಿ ಸಮಾಜಸೇವೆಯಲ್ಲಿ ನಿರತರಾಗಿರುವ ಓರ್ವ ಸಾಧಕರನ್ನು ಗುರ್ತಿಸಿ 10,000/-ರೂ. ನಗದು ಹಾಗೂ ಫಲಕವನ್ನು ನೀಡಿ ಗೌರವಿಸಲು ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆಯಲ್ಲಿ ಇವರಿಬ್ಬರ ಮಗಳಾದ ನಗರಸಭೆ ಸದಸ್ಯರೂ ಆದ ಮಂಜುಳಾಉದಯಶಂಕರ್ ಅವರು ಕೈ ಜೋಡಿಸಿದ್ದಾರೆ.