ದತ್ತಿಯ ಮೊಬಲಗು ರೂ. ಇಪ್ಪತ್ತೈದು ಸಾವಿರ; 2008ರ ಮೇ ತಿಂಗಳಿನಲ್ಲಿ ಈ ದತ್ತಿಯನ್ನು ಸ್ಥಾಪಿಸಲಾಗಿದೆ. ಕನ್ನಡದ ಹೆಸರಾಂತ ಜಾನಪದ ವಿದ್ವಾಂಸ ಕವಿ, ವಿಮರ್ಶಕ, ಸಂಸ್ಕೃತಿ ಚಿಂತಕ, ವಿಶ್ರಾಂತ ಪ್ರಾಧ್ಯಾಪಕರ ಡಾ. ರಾಮೇಗೌಡ(ರಾಗೌ) ಅವರು ಈ ದತ್ತಿಯನ್ನು ತಮ್ಮ ಮಗಳ ನೆನಪಿಗಾಗಿ ಸ್ಥಾಪಿಸಿದ್ದಾರೆ. ಪ್ರತಿವರ್ಷದ ಬುದ್ಧ ಪೂರ್ಣಿಮೆಯಂದು ಮಹಿಳಾ ಸಮಸ್ಯೆಯನ್ನು ಕುರಿತಂತೆ ದತ್ತಿ ಉಪನ್ಯಾಸ ಏರ್ಪಡಿಸಲಾಗುತ್ತದೆ. ಈ ಉಪನ್ಯಾಸವನ್ನು ಪುಸ್ತಕ ರೂಪದಲ್ಲಿ ಕರ್ನಾಟಕ ಸಂಘವು ಪ್ರಕಟಿಸುತ್ತಿದೆ.