ಶ್ರೀಮತಿ ಗುಣಸಾಗರಿ ನಾಗರಾಜು ದಂಪತಿಗಳು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದವರು. ಇಬ್ಬರೂ ಸರ್ಕಾರಿ ಉದ್ಯೋಗಿಗಳು, ಅದರಲ್ಲೂ ಶ್ರೀಮತಿ ಗುಣಸಾಗರಿ ನಾಗರಾಜು ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡವರು ಕವಯತ್ರಿಯಾಗಿ, ಕಥೆಗಾರ್ತಿಯಾಗಿ ಹೆಸರು ಮಾಡಿರುವ ಶ್ರೀಮತಿಯವರು ಹಲವಾರು ಸಂಘ ಕ್ಷೇತ್ರಗಳೊಡನೆ ಒಡನಾಟವಿಟ್ಟುಕೊಂಡಿರುವವರು. ನಿವೃತ್ತಿ ಜೀವನ ಸಾಗಿಸುತ್ತಿರುವ ಈ ದಂಪತಿಗಳು ತಮ್ಮ ಹೆಸರಿನಲ್ಲಿ ದತ್ತಿಯೊಂದನ್ನು ಕರ್ನಾಟಕ ಸಂಘದಲ್ಲಿ ಸ್ಥಾಪಿಸಿ ಜನಪದ ಕಲಾವಿದರಿಬ್ಬರಿಗೆ ತಲಾ 5000/- ರೂಗಳ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲು ವ್ಯವಸ್ಥೆ ಮಾಡಿದ್ದಾರೆ.