ಸ್ವಾತಂತ್ರ್ಯಾನಂತರದ ರಾಜಕೀಯ ಕ್ಷೇತ್ರದಲ್ಲಿ ಒಂದು ದೊಡ್ಡ ಹೆಸರು. ತುಮಕೂರು ಜಿಲ್ಲೆಯ ಕುಣಿಗಲ್ ತಾ|| ಎಲೆಕಡಕಲು ಗ್ರಾಮದ ವೈ.ಕೆ. ರಾಮಯ್ಯ ಅವರು ತಾಲ್ಲೂಕು ಬೋರ್ಡ್ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯಾಗಿ ಅಪಾರವಾದ ಹೆಸರು ಮಾಡಿ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿಕೊಂಡಿರುವ ಮರೆಯಲಾರದ ಮಹಾನುಭಾವ ಶ್ರೀಯುತರ ಹೆಸರನ್ನು ಚಿರಸ್ಥಾಯಿಗೊಳಿಸಬೇಕೆಂಬ ಉದ್ದೇಶದಿಂದ ಅವರ ಸ್ನೇಹಿತರು, ಹಿತೈಷಿಗಳು ಕರ್ನಾಟಕ ಸಂಘದಲ್ಲಿ ದತ್ತಿಯೊಂದನ್ನು ಸ್ಥಾಪಿಸಿ ಪ್ರತಿವರ್ಷ ಓರ್ವ ಕೃಷಿಕನಿಗೆ ಹಾಗೂ ಕೃಷಿ ತಜ್ಞನಿಗೆ ತಲಾ 10.000/- ರೂಗಳ ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲು ವ್ಯವಸ್ಥೆ ಮಾಡಲಾಗಿದೆ.