fashion img

ಚಟುವಟಿಕೆಗಳು

ಇತರ ಸಾಂಸ್ಕೃತಿಕ ಶೈಕ್ಷಣಿಕ ಚಟುವಟಿಕೆಗಳು

ದತ್ತಿ ಉಪನ್ಯಾಸಗಳು, ಪ್ರಶಸ್ತಿ ಪ್ರದಾನ ಸಮಾರಂಭಗಳು, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಕಾವ್ಯವಾಚನ ಸ್ಪರ್ಧೆ, ಗಮಕ, ಚರ್ಚಾಸ್ಪರ್ಧೆ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳು ಸಂಘದ ವತಿಯಿಂದ ಕಾಲಕಾಲಕ್ಕೆ ಜರುತ್ತಿದೆ. 2008ರ ಫೆಬ್ರವರಿಯಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಸಾಹಿತ್ಯ-ಮಾನವಶಾಸ್ತ್ರ-ಇತಿಹಾಸ ವಿಷಯಗಳನ್ನು ಕುರಿತ ಎರಡು ದಿನದ ಅಂತರಶಿಸ್ತೀಯ ವಿಚಾರ ಸಂಕಿರಣ ನಡೆಸಿದುದು ನಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಒಂದು ಮುಖ್ಯ ಕಾರ್ಯಕ್ರಮವಾಗಿದೆ. ಪ್ರತಿವರ್ಷ ಈ ರೀತಿಯ ಅಂತರಶಿಸ್ತೀಯ ನೆಲೆಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಚಿಂತನೆಯ ಕ್ಷಿತಿಜಗಳನ್ನು ವಿಸ್ತರಿಸುವ ಆಶಯ ನಮ್ಮದು.

ಅಕ್ಟೋಬರ್ 2ರಂದು ಗಾಂಧಿಜಯಂತಿಯನ್ನು ಆಚರಿಸಿ, ಗಾಂಧೀಜಿ ಅವರ ವರ್ತಮಾನದ ಪ್ರಸ್ತುತತೆಯನ್ನು ಪ್ರತಿವರ್ಷ ಚರ್ಚೆಗೆ ಒಳಪಡಡಿಸಲಾಗುತ್ತಿದೆ.