ದತ್ತಿಯ ಮೊಬಲಗು ರೂ. ಐವತ್ತು ಸಾವಿರ. ಮಂಡ್ಯ ತಾಲ್ಲೂಕು ಪಂಚೇಗೌಡನದೊಡ್ಡಿ ಯವರಾದ ಎಂ.ಸಿದ್ಧರಾಮು ಅವರು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆಯಲ್ಲಿರುವಾಗಲೇ ದಿವಂಗತರಾಗಿದ್ದಾರೆ. ಇವರ ಹೆಸರಿನಲ್ಲಿ ದತ್ತಿಯನ್ನು ಸ್ಥಾಪಿಸುವ ಉದ್ದೇಶದಿಂದ ಅವರ ಕುಟುಂಬವರ್ಗ ಹಾಗೂ ಹಿತೈಷಿಗಳು ಐವತ್ತು ಸಾವಿರ ರೂ.ಗಳನ್ನು ಈಗಾಗಲೇ ಸಂಘಕ್ಕೆ ನೀಡಿದ್ದಾರೆ. ಈ ಮೊತ್ತದಿಂದ ಬರುವ ಬಡ್ಡಿಯ ಪೂರ್ತಿ ಹಣವನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ವಿಜ್ಞಾನ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಯೊಬ್ಬನಿಗೆ ಪ್ರತಿವರ್ಷ ಶಿಷ್ಯ ವೇತನವಾಗಿ ನೀಡಿ ಪ್ರೋತ್ಸಾಹಿಸಲಾಗುತ್ತದೆ.