ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಈರೇಗೌಡನ ದೊಡ್ಡಿಯ ಶ್ರೀಯುತ ರಾಮೇಗೌಡರು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಕವಿಯಾಗಿ, ನಾಟಕಕಾರರಾಗಿ, ಜಾನಪದ ತಜ್ಞರಾಗಿ, ವಿದ್ವಾಂಸರಾಗಿ `ಡಾ. ರಾಗೌ’ ಎಂದೇ ಸಾಹಿತ್ಯವಲಯದಲ್ಲಿ ಗುರ್ತಿಸಿಕೊಂಡಿದ್ದಾರೆ. ಇವರ ಶಿಷ್ಯರು , ಸ್ನೇಹಿತರು, ಹಿತೈಷಿಗಳು ಒಟ್ಟುಗೂಡಿ ಕರ್ನಾಟಕ ಸಂಘದಲ್ಲಿ ದತ್ತಿಯೊಂದನ್ನು ಸ್ಥಾಪಿಸಿ, ಪ್ರತಿವರ್ಷ ಜಾನಪದ, ಕಾವ್ಯ, ವಿಮರ್ಶೆ ಹಸ್ತಪ್ರತಿ ಮುಂತಾದ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿರುವ ಓರ್ವ ಸಾಧಕರನ್ನು ಗುರ್ತಿಸಿ 15.000/-ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುತ್ತಿದೆ.