ಕರ್ನಾಟಕದ ಹಿರಿಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದು. ಮಂಡ್ಯ ಜಿಲ್ಲೆಯ ಹಿರಿಯ ಸಾಂಸ್ಕೃತಿಕ ನಾಯಕರ ಆಸಕ್ತಿಯಂತೆ ಸ್ವಾತಂತ್ರ್ಯ ಪೂರ್ವದಲ್ಲೇ, ಅಂದರೆ 1946ರಲ್ಲಿ ಮಂಡ್ಯ ನಗರದಲ್ಲಿ ಈ ಸಂಘವು ಸ್ಥಾಪನೆಯಾಯಿತು. ಸಂಘವು ಸ್ಥಾಪನೆಯಾಗಿ ಈಗ 73 ವರ್ಷಗಳು ತುಂಬಿ ನಡೆದಿದೆ.
ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಸಂಘಟಿತವಾದ ಈ ಸಂಸ್ಥೆಯು 73 ವರ್ಷಗಳ ಕಾಲ ತನ್ನ ಚೈತನ್ಯವನ್ನು ಉಳಿಸಿಕೊಂಡು ಕ್ರಿಯಾಶೀಲವಾಗಿದೆ ಎಂದರೆ ಅದೇನೂ ಕಡಿಮೆಯ ಸಾಧನೆಯಲ್ಲ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಹಿರಿಯದು ಮತ್ತು ಮಹತ್ವದ್ದು ಎನಿಸಿರುವ ಸಂಘವು 73 ವರ್ಷ ತುಂಬಿದ ನೆನಪಿಗೆ ವಜ್ರಮಹೋತ್ಸವ ವರ್ಷವನ್ನು ಆಚರಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಆಯಾಮದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದು ಹೊಸ ವಿನ್ಯಾಸವನ್ನು ಸೃಷ್ಟಿಸಿಕೊಳ್ಳುತ್ತಿದೆ
ಜಿಲ್ಲೆಯ ಮತ್ತು ರಾಜ್ಯದ ಸಂಬಂಧದಲ್ಲಿ ಒಂದು ದೊಡ್ಡ ಹೆಸರು. ನಾಗಮಂಗಲ ತಾಲ್ಲೂಕಿನ ಕರಡಹಳ್ಳಿಯ ಸ್ವಾತಂತ್ರ್ಯ ಹೋರಾಟದ ಕುಟುಂಬದಿಂದ ಬಂದು ವಿಧಾನಸಭಾ ಸದಸ್ಯರಾಗಿ ಮಂಡ್ಯ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಸಚ್ಚಾರಿತ್ರ್ಯ, ಸಹೃದಯತೆಗೆ, ಶಿಸ್ತಿಗೆ ಹೆಸರಾದರು. ಈ ಮಹಾನೀಯರನ್ನು ಸದಾ ಸ್ಮರಿಸಲು ಸಾಧ್ಯವಾಗುವಂತೆ ಒಡನಾಡಿಗಳು, ಅಭಿಮಾನಿಗಳು ದತ್ತಿ ಸ್ಥಾಪಸಿದ್ದಾರೆ.
ದತ್ತಿಯ ಮೊಬಲಗು ರೂ. ಮೂರು ಲಕ್ಷ 2007ರ ಮಾರ್ಚಿಯ ಲ್ಲಿ ದತ್ತಿಯನ್ನು ಸ್ಥಾಪಿಸಿದೆ. ಮಂಡ್ಯದ ಜನಪ್ರಿಯ ನಾಯಕರೂ, ಜನತಾ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಶ್ರೀ ಎಚ್.ಡಿ.ಚೌಡಯ್ಯ ಮತ್ತು ಅವರ ಕುಟುಂಬ ಒಂದು ಲಕ್ಷ ರೂಗಳನ್ನೂ, ನಾಗಮಂಗಲದ ಮಾಜಿ ಸಚಿವರೂ ಆದ ಶ್ರೀ ಚಲುವರಾಯಸ್ವಾಮಿ ಅವರು 2 ಲಕ್ಷ ರೂ.ಗಳನ್ನೂ ನೀಡಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಪ್ರತಿವರ್ಷದಲ್ಲಿ ಒಮ್ಮೆ ಸಮಕಾಲೀನ ಪ್ರಚಲಿತ ವಿಷಯವನ್ನು ಕುರಿತಂತೆ ದತ್ತಿ ಉಪನ್ಯಾಸ ಏರ್ಪಡಿಸಲಾಗುವುದು ಮತ್ತು ಯಾವುದೇ ವಿಷಯ ಕುರಿತ ಆಯ್ಕೆಯಾದ ಪುಸ್ತಕವೊಂದಕ್ಕೆ ಹತ್ತು ಸಾವಿರ ರೂ.ಗಳ ನಗದನ್ನೊಳಗೊಂಡ`ಪುಸ್ತಕ ಪ್ರಶಸ್ತಿ’ಯನ್ನು ನೀಡಲಾಗುವುದು.