ಕರ್ನಾಟಕದ ನೋಂದಾಯಿತ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಮಂಡ್ಯದ ಕರ್ನಾಟಕ ಸಂಘವು ೦೧-೦೪-೨೦೧೬ ರಿಂದ ೩೧-೦೩-೨೦೧೭ ರವರೆಗೆ ಒಂದು ವರ್ಷದ ಅವಧಿಯಲ್ಲಿ ನಡೆಸಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ:
೧. ಎಂ.ಸಿದ್ಧರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ : ದಿನಾಂಕ : ೧೭-೦೪-೨೦೧೬ ರ ಭಾನುವಾರ ಸಂಜೆ ೬ ಗಂಟೆಗೆ ಮಂಡ್ಯದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಎಚ್.ಡಿ.ಚೌಡಯ್ಯನವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮಂಡ್ಯ ತಾಲ್ಲೂಕಿನ ಬೇಬಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಸಹಶಿಕ್ಷಕರಾದ ಶ್ರೀ ಎಂ.ಶರವಣನ್ ಅವರಿಗೆ ಸದರಿ ಪ್ರಶಸ್ತಿಯನ್ನು ನೀಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕು.ಮಲ್ಲಾಜಮ್ಮ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಜಿ.ಎನ್.ಶಿವರುದ್ರಪ್ಪ, ಇಂಗ್ಲೀಷ್ ಉಪನ್ಯಾಸಕರಾದ ಶ್ರೀ ಎಸ್.ಸುದೀಪ್‌ಕುಮಾರ್‌ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
೨. ವಿಶ್ವಪುಸ್ತಕ ದಿನಾಚರಣೆ : ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ಸಂಘ, ಮಂಡ್ಯ ಮತ್ತು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ, ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೨೩-೦೪-೨೦೧೬ರಂದು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಶಿಕ್ಷಣ ಟ್ರಸ್ಟಿನ ಅಧ್ಯಕ್ಷರಾದ ಮಾನ್ಯ ಡಾ.ಎಚ್.ಡಿ.ಚೌಡಯ್ಯನವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಬಂಜಗೆರೆ ಜಯಪ್ರಕಾಶ್ ಅವರು ನೆರವೇರಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಜನತಾ ಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಎಚ್. ಹೊನ್ನಪ್ಪ ಹಾಗೂ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಚನ್ನಕೃಷ್ಣಯ್ಯ ಉಪಸ್ಥಿತರಿದ್ದರು. ಮಧ್ಯಾಹ್ನ ೧೧.೩೦ಕ್ಕೆ ವಿಚಾರಗೋಷ್ಠಿ ಪ್ರಾರಂಭಗೊAಡು 'ಪುಸ್ತಕ ಸಂಸ್ಕೃತಿ-ಸಮಕಾಲೀನ ಅಗತ್ಯ' ಎಂಬ ವಿಷಯವನ್ನು ಕುರಿತಂತೆ ಬೆಂಗಳೂರಿನ ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಲಿಂಗರಾಜಯ್ಯ ಬೆಳಕೆರೆಯವರು, 'ಪುಸ್ತಕ: ಓದು ಮತ್ತು ಗ್ರಹಿಕೆ' ಎಂಬ ವಿಷಯವನ್ನು ಕುರಿತು ಮಾನಸಗಂಗೋತ್ರಿಯ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ. ಮಹದೇವ ಅವರು ವಿಚಾರ ಮಂಡಿಸಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಧ್ಯಾಹ್ನ ೨ ಗಂಟೆಗೆ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ನ್ಯಾಯವಾದಿಗಳಾದ ಶ್ರೀ ಜ.ಹೋ.ನಾರಾಯಣಸ್ವಾಮಿ ಅವರು ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಮಂಡ್ಯದ ಪ್ರಗತಿಪರ ಹೋರಾಟಗಾರರಾದ ಶ್ರೀ ಗುರು ಪ್ರಸಾದ್ ಕೆರಗೋಡು ಅವರು ಉಪಸ್ಥಿತರಿದ್ದರು.
೩. ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಮತ್ತು ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ : ದಿನಾಂಕ : ೩೦-೦೪-೨೦೧೬ ರ ಶನಿವಾರ ಸಂಜೆ ೫.೩೦ ಗಂಟೆಗೆ ಮಂಡ್ಯದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜನತಾಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಎಚ್.ಹೊನ್ನಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀಮತಿ ತಾರಿಣಿ ಚಿದಾನಂದ ಅವರು ರಚಿಸಿರುವ 'ಮಗಳು ಕಂಡ ಕುವೆಂಪು' ಕೃತಿಗೆ ಕೆ.ಸಿಂಗಾರಿಗೌಡ ಪ್ರಶಸ್ತಿಯನ್ನು, ಡಾ.ಸಿ.ಪಿ.ಸಿದ್ದಾಶ್ರಮ ಅವರ ಉತ್ಕೃಷ್ಟ ಸಾಹಿತ್ಯ ಸೇವೆಗಾಗಿ ಡಾ.ರಾಗೌ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು. ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಚಿನ್ನಪ್ಪಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಪಿ. ಬೆಟ್ಟೇಗೌಡ ಅವರು ಅಭಿನಂದನಾ ನುಡಿಗಳನ್ನು ನುಡಿದರು.
೪. ನಾಡೋಜ ಡಾ.ಜಿ.ನಾರಾಯಣ ಪ್ರಶಸ್ತಿ ಪ್ರದಾನ ಸಮಾರಂಭ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ದಿನಾಂಕ : ೧೫-೦೫-೨೦೧೬ ರ ಭಾನುವಾರ ಸಂಜೆ ೫.೩೦ ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ರಾಜ್ಯ ಒಕ್ಕಲಿಗರ ಒಕ್ಕೂಟ, ಬೆಂಗಳೂರು ಇವರ ಸಹಯೋಗವಿತ್ತು. ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರಭಟ್ ಅವರಿಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಾಡಿನ ಖ್ಯಾತ ಸಾಹಿತಿಗಳಾದ ಡಾ.ಸಿದ್ಧಲಿಂಗಯ್ಯ ಅವರು ಪ್ರಶಸ್ತಿ ಪುರಸ್ಕೃತರನ್ನು ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಆರ್, ಅಶೋಕ್, ಮಾಜಿ ಸಚಿವರು, ಚನ್ನಪಟ್ಟಣದ ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ ಸಿ.ಪಿ.ಯೋಗೇಶ್ವರ್, ಕರ್ನಾಟಕ ಸಂಘದ ಪೋಷಕರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಬಿ.ರಾಮಕೃಷ್ಣ ಅವರು ಉಪಸ್ಥಿತರಿದ್ದರು.
೫. ಕವಿತಾ ಸ್ಮಾರಕ ದತ್ತಿ ಉಪನ್ಯಾಸ -೯ : ಸಂಘದ ಆವರಣದಲ್ಲಿ ದಿನಾಂಕ : ೨೧-೦೫-೨೦೧೬ ರ ಶನಿವಾರ ಸಂಜೆ ೫.೩೦ ಗಂಟೆಗೆ ಸಮರ್ಥನಾ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ನಾಗರೇವಕ್ಕ ಅವರ ಅಧ್ಯಕ್ಷತೆಯಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು. “ಹೊಸಕಾಲದ ಸ್ಥಿತ್ಯಂತರಗಳಲ್ಲಿ ಮಹಿಳೆ' ಎಂಬ ವಿಷಯದ ಮೇಲೆ ಮಂಡ್ಯದ ಮಹಿಳಾ ಪರ ಹೋರಾಟಗಾರರಾದ ಶ್ರೀಮತಿ ಎಸ್.ಕುಮಾರಿರವರು ವಿಸ್ತೃತವಾದ ಉಪನ್ಯಾಸವನ್ನು ನೀಡಿದರು. ನಾಡಿನ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾದ ಡಾ.ರಾಗೌ ಅವರ ಏಕೈಕ ಪುತ್ರಿ ಶ್ರೀಮತಿ ಕವಿತಾ ಅವರ ಸ್ಮರಣಾರ್ಥ ಕಳೆದ ಒಂಬತ್ತು ವರ್ಷಗಳಿಂದ ಈ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂಬುದನ್ನು ಸ್ಮರಿಸಬಹುದಾಗಿದೆ.
೬. ಆಷಾಢದ ಒಂದು ದಿನ' ನಾಟಕ ಪ್ರದರ್ಶನ : ಜಗದೀಶ ಮನವಾರ್ತೆಯವರು ನಿರ್ದೇಶಿಸಿದ್ದ ಮೋಹನ್ ರಾಕೇಶ್ ಅವರ 'ಆಷಾಢದ ಒಂದು ದಿನ' ಎಂಬ ನಾಟಕವನ್ನು ದಿನಾಂಕ : ೧೦-೦೬-೨೦೧೬ರ ಸಂಜೆ ೬.೩೦ಕ್ಕೆ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಭಿನಯಿಸಲಾಯಿತು. ಉಚಿತ ಪ್ರವೇಶವಿದ್ದ ಈ ನಾಟಕವು ಅದ್ದೂರಿ ಪ್ರದರ್ಶನವನ್ನು ಕಂಡಿತು. ಭಾರತೀಯ ರಂಗಶಿಕ್ಷಣ ಕೇಂದ್ರ ರಂಗಶಾಲೆಯ ವಿದ್ಯಾರ್ಥಿಗಳು ಪಾತ್ರಧಾರಿಗಳಾಗಿ ಅಭಿನಯಿಸಿದರು. ಮೈಸೂರಿನ ರಂಗಾಯಣದವರ ಈ ನಾಟಕ ಪ್ರದರ್ಶನಕ್ಕೆ ಮಂಡ್ಯದ ಕರ್ನಾಟಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಕಾರವಿತ್ತು. ಕನ್ನಡಕ್ಕೆ : ಶ್ರೀ ಸಿದ್ಧಲಿಂಗ ಪಟ್ಟಣಶೆಟ್ಟಿ, ರಂಗವಿನ್ಯಾಸ : ಎಚ್.ಕೆ.ದ್ವಾರಕಾನಾಥ್, ಸಂಗೀತ : ಶ್ರೀ ಶ್ರೀನಿವಾಸಭಟ್(ಚೀನಿ), ಬೆಳಕು : ಮಹೇಶ್ ಕಲ್ಲತ್ತಿ, ಸಹ ನಿರ್ದೇಶನ : ಸಂತೋಷ್ ದಿಂಡಗನೂರು ಅವರದಾಗಿತ್ತು.
೭. ವೈ.ಕೆ.ರಾಮಯ್ಯ ಪ್ರಶಸ್ತಿ ಪ್ರದಾನ ಸಮಾರಂಭ : ದಿನಾಂಕ : ೦೮-೦೭-೨೦೧೬ರ ಶುಕ್ರವಾರ ಸಂಜೆ ೫.೩೦ ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ, ಕೃಷ್ಣರಾಜ ಪರಿಷನ್ಮಂದಿರದಲ್ಲಿ ಮಾನ್ಯ ಶಾಸಕರು, ಮಾಜಿ ಸಚಿವರು ಆದ ಶ್ರೀ ಅರವಿಂದ ಲಿಂಬಾವಳಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ನಿವೃತ್ತ ಪ್ರಾಂಶುಪಾಲರು ಹಾಗೂ ಪ್ರಸಿದ್ಧ ಕವಿಗಳು ಆಗಿರುವ ಶ್ರೀ ಕೆ.ಬಿ. ಸಿದ್ದಯ್ಯನವರನ್ನು ನವ್ಯೋತ್ತರ ಕಾವ್ಯ ಪರಂಪರೆಯಲ್ಲಿ ಗೈದಿರುವ ಸಾಹಿತ್ಯ ಕೃಷಿಗಾಗಿ ಸದರಿ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿತ್ತು. ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರು ಆದ ಶ್ರೀ ರಾಮಚಂದ್ರಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿರುವ ಡಾ.ಎಚ್.ಡಿ.ರಂಗನಾಥ್‌ರವರು ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬೆಳಕೆರೆ ಲಿಂಗರಾಜಯ್ಯ ಅವರು ಪ್ರಶಸ್ತಿ ಪುರಸ್ಕೃತರನ್ನು ಕುರಿತು ಅರ್ಥಗರ್ಭಿತವಾಗಿ ಮಾತನಾಡಿದರು. ವೈ.ಕೆ. ರಾಮಯ್ಯ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎನ್.ಆರ್. ರಂಗಯ್ಯನವರ ಉಪಸ್ಥಿತಿಯಿತ್ತು. ಕಾರ್ಯಕ್ರಮಕ್ಕೆ ಬೆಂಗಳೂರಿನ ರಾಜ್ಯ ಒಕ್ಕಲಿಗರ ಒಕ್ಕೂಟದ ಸಹಯೋಗವಿತ್ತು.
೮. ಪಾದುಕಾ ಕಿರೀಟಿ ನಾಟಕ ಪ್ರದರ್ಶನ : ಶ್ರೀ ಕೆ.ವಿ.ಶಂಕರಗೌಡ ೧೦೧ : ಸಂಸ್ಮರಣೆಗಾಗಿ ಜನದನಿ ಸಾಂಸ್ಕೃತಿಕ ಟ್ರಸ್ಟಿನವತಿಯಿಂದ ಶ್ರೀ ಕೆ.ವಿ.ಶಂಕರಗೌಡ ವಿರಚಿತ ಪಾದುಕಾ ಕಿರೀಟಿ ನಾಟಕವನ್ನು ದಿನಾಂಕ : ೩೦-೦೭-೨೦೧೬ ಮತ್ತು ೩೧-೦೭-೨೦೧೬ ರಂದು ಮಂಡ್ಯದ ಪಿ.ಇ.ಎಸ್. ವಿಜ್ಞಾನ ಕಾಲೇಜಿನ ವಿವೇಕಾನಂದ ರಂಗಮAದಿರದಲ್ಲಿ ಅಭಿನಯಿಸಲಾಯಿತು. ಪಿ.ಗಂಗಾಧರ ಸ್ವಾಮಿಯವರ ನಿರ್ದೇಶನ, ನವೀನ್ ಮಂಡ್ಯ ಇವರ ಸಹ ನಿರ್ದೇಶನವಿತ್ತು. ಮೈಸೂರಿನ ಬಿ.ಆರ್.ರವೀಶ್ ಅವರ ಸಂಗೀತ, ಮಾಲತೇಶ್ ಆರ್ ಬಡಿಗೇರ ಅವರ ಉಡುಗೆ ತೊಡುಗೆ ನಿರ್ವಹಣೆ ಇತ್ತು. ನಾಟಕ ಪ್ರದರ್ಶನಗಳು ಕರ್ನಾಟಕ ಸಂಘದ ಸಹಕಾರದಲ್ಲಿ ನೆರವೇರಿದವು.
೯. ಡಾ.ರಾಜ್‌ಕುಮಾರ್ ಸಮಗ್ರ ಚರಿತ್ರೆ ಸಂಪುಟಗಳ ಮರು ಲೋಕಾರ್ಪಣೆ : ೬೩ನೇ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ೨೦೧೫ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದ ಶ್ರೀ ದೊಡ್ಡ ಹುಲ್ಲೂರು ರುಕ್ಕೋಜಿಯವರ 'ಡಾ.ರಾಜ್‌ಕುಮಾರ್ ಸಮಗ್ರ ಚರಿತ್ರೆ' ಕೃತಿಯ ಸಂಪುಟಗಳ ಮರುಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ : ೦೪-೧೧-೨೦೧೬ರ ಶುಕ್ರವಾರ ಸಂಜೆ ೫.೩೦ಕ್ಕೆ ಮಂಡ್ಯದ ರೈತಸಭಾಂಗಣದಲ್ಲಿ ನೆರವೇರಿತು. ಮಾಜಿ ಶಾಸಕರಾದ ಎಂ.ಶ್ರೀನಿವಾಸ್‌ರವರ ಅಧ್ಯಕ್ಷತೆಯಿದ್ದ ಕರ‍್ಯಕ್ರಮವನ್ನು ನಾಗಮಂಗಲ ಶಾಸಕರಾದ ಶ್ರೀ ಚಲುವರಾಯಸ್ವಾಮಿ ಉದ್ಘಾಟಿಸಿದರು. ಪ್ರಗತಿಪರ ರೈತ ಶ್ರೀ ಎ.ಸಿ.ದೊಡ್ಡಲಿಂಗೇಗೌಡ ಪುಸ್ತಕ ಬಿಡುಗಡೆಗೊಳಿಸಿದರು. ಪುಸ್ತಕ ಕುರಿತು ಮಾತನಾಡಿದ ಸಂಘದ ಅಧ್ಯಕ್ಷರಾದ ಪ್ರೊ.ಬಿ.ಜಯಪ್ರಕಾಶಗೌಡ ಡಾ.ರಾಜ್‌ಕುಮಾರ್ ಅವರ ಜೀವನದ ಬಹುಮುಖ್ಯ ಘಟನೆಗಳನ್ನು ಸಭಿಕರೆದುರು ತೆರೆದಿಟ್ಟರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ ಎಂ.ಎಸ್.ಆತ್ಮಾನAದ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಚ್.ಹೊನ್ನಪ್ಪ ಹಾಗೂ ಶ್ರೀ ಬಿ.ರಾಮಕೃಷ್ಣ ಅವರು ಭಾಗಿಯಾಗಿದ್ದರು. ಪುಸ್ತಕದ ಲೇಖಕರಾದ ಶ್ರೀ ದೊಡ್ಡ ಹುಲ್ಲೂರು ರುಕ್ಕೋಜಿ ಹಾಗೂ ಬೆಂಗಳೂರಿನ ಚಲನಚಿತ್ರ ವಾಣಿಜ್ಯೋದ್ಯಮಿಗಳಾದ ಶ್ರೀ ಚಿನ್ನೇಗೌಡರ ಉಪಸ್ಥಿತಿಯಿತ್ತು. ಇದೇ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕರಾದ ಶ್ರೀ ಸ್ವಾಮಿಗೌಡ ಹಾಗೂ ಶ್ರೀ ರಾಮಲಿಂಗೇಗೌಡ, ಹಿರಿಯ ಅಭಿನೇತ್ರಿ ಶ್ರೀಮತಿ ಎಂ.ಎಸ್.ಗುಣ, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಕಾಳೇನಹಳ್ಳಿ ಕೆಂಚೇಗೌಡ, ಪ್ರಗತಿಪರ ರೈತ ಶ್ರೀ ಎ.ಸಿ.ದೊಡ್ಡಲಿಂಗೇಗೌಡ, ಪ್ರಗತಿಪರ ರೈತ ಮಹಿಳೆಯರಾದ ಶ್ರೀಮತಿ ಅಶ್ವಿನಿ ಕೋಂ ಶ್ರೀ ರಾಜೇಗೌಡ, ಹಾಗೂ ಶ್ರೀಮತಿ ಜಯಲಕ್ಷಿö್ಮ ಕೋಂ ಶ್ರೀ ಜಿ.ಎಸ್.ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳೆಲ್ಲರು ಹಾಜರಿದ್ದರು.
೧೦. ಆಂದೋಲನ ದತ್ತಿ ಉಪನ್ಯಾಸ : ಮಂಡ್ಯದ ಗಾಂಧಿಭವನದಲ್ಲಿ ದಿನಾಂಕ : ೧೫-೧೧-೨೦೧೬ನೇ ಮಂಗಳವಾರ ಬೆಳಿಗ್ಗೆ 'ಮಾಧ್ಯಮ-ಸತ್ಯ ಮತ್ತು ಮಿಥ್ಯೆ' ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಮೈಸೂರಿನ ಕೆ.ಜಿ.ಎಚ್.ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ನಿರಂಜನ ವಾನಳ್ಳಿ ಅವರು ಉಪನ್ಯಾಸ ನೀಡಿದರು. ಕನ್ನಡಪ್ರಭ ದಿನಪತ್ರಿಕೆಯ ಮಂಡ್ಯ ಜಿಲ್ಲೆಯ ವರದಿಗಾರರಾದ ಶ್ರೀ ಕೆ.ಎನ್.ರವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿಗಳಾದ ಡಾ.ಪ್ರದೀಪ್‌ಕುಮಾರ್ ಹೆಬ್ರಿಯವರ 'ಪೂಜ್ಯ ಬಾಪೂಜಿ ನೆನಪಿನಲ್ಲಿ' ಪುಸ್ತಕವನ್ನು ಕೊಳಲು ಪತ್ರಿಕೆ ಸಂಪಾದಕರಾದ ಶ್ರೀ ಡಿ.ಎನ್.ಶ್ರೀಪಾದು ಅವರು ಬಿಡುಗಡೆ ಮಾಡಿದರು. ಸಾಹಿತಿಗಳು ಹಾಗೂ ದತ್ತಿನಿಧಿ ದಾನಿಗಳು ಆದ ಡಾ. ಅರ್ಜುನಪುರಿ ಅಪ್ಪಾಜಿಗೌಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
೧೧. ಮಕ್ಕಳ ನಾಟಕೋತ್ಸವ - ೨೦೧೬ : ಮಂಡ್ಯದ ಪಿಇಎಸ್ ವಿಜ್ಞಾನ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮAದಿರದಲ್ಲಿ ದಿನಾಂಕ : ೨೧-೧೧-೨೦೧೬ ರಿಂದ ೨೬-೧೧-೨೦೧೬ರ ವರೆಗೆ ಪ್ರತಿದಿನ ಸಂಜೆ ೬.೩೦ ಕ್ಕೆ ಮಕ್ಕಳ ನಾಟಕೋತ್ಸವ ಜರುಗಿತು. 'ಬಾಸ' ಮಹಾಕವಿ ರಚಿಸಿರುವ 'ದೂತಪರ್ವ' ಎಂಬ ಪೌರಾಣಿಕ ಹಿನ್ನೆಲೆಯ ನಾಟಕವನ್ನು ಶ್ರೀ ಗಣಪತಿ ಬಿ.ಹೆಗ್ಗಡೆ ಹಿತ್ತಲ ಕೈ ನಿರ್ದೇಶಿಸಿದ್ದರು. ಈ ನಾಟಕವನ್ನು ಮೊದಲದಿನ ಜನದನಿ ಕಲಾವಿದರು ಅಭಿನಯಿಸಿದರು. ಎಚ್.ಎಸ್.ವೆಂಕಟೇಶ ಮೂರ್ತಿ ರಚಿಸಿರುವ 'ಅಳಿಲು ರಾಮಾಯಣ' ನಾಟಕವನ್ನು ಶ್ರೀ ಶಿವು ಯಾಚೇನಹಳ್ಳಿ ಅವರು ನಿರ್ದೇಶಿಸಿದ್ದರು. ಹನಕೆರೆಯ ವಿವೇಕಾ ವಿದ್ಯಾಸಂಸ್ಥೆಯ ಮಕ್ಕಳು ಎರಡನೇ ದಿನದ ನಾಟಕವಾಗಿ ಅಭಿನಯಿಸಿದರು. ಮೂರನೆ ದಿನ 'ಕಾಗೆಕಣ್ಣು ಇರುವೆ ಬಲ' ಎಂಬ ಶ್ರೀ ಕೋಟಗಾನಹಳ್ಳಿ ರಾಮಯ್ಯನವರ ನಾಟಕವು ಪ್ರದರ್ಶನ ಕಂಡಿತು. ಶ್ರೀ ನವೀನ್, ಮಂಡ್ಯ ಇವರ ನಿರ್ದೇಶನವಿತ್ತು. ಮಂಡ್ಯದ ಸದ್ವಿದ್ಯಾ ಪ್ರೌಢಶಾಲೆಯ ಮಕ್ಕಳು ಪಾತ್ರಧಾರಿಗಳಾಗಿ ತೆರೆಯ ಮೇಲೆ ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರ 'ಕಂಸಾಯಣ' ನಾಟಕವು ನಾಲ್ಕನೆಯ ದಿನ ಪ್ರದರ್ಶನ ಕಂಡಿತು. ಶ್ರೀ ಪುನೀತ್, ಮಂಡ್ಯ ಇವರ ನಿರ್ದೇಶನವಿತ್ತು. ಕೆ.ಹೊನ್ನಲಗೆರೆಯ ಆರ್.ಕೆ.ವಿದ್ಯಾಸಂಸ್ಥೆಯ ಮಕ್ಕಳು ನಾಟಕವನ್ನು ಅಭಿನಯಿಸಿದರು. ಐದನೆಯ ದಿನಕ್ಕೆ ಕಾವ್ಯ ಕಾಂತಿಯವರ, 'ರಾಜನ ಕಿವಿ' ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಈ ನಾಟಕವನ್ನು ಶ್ರೀಮತಿ ಅಮೃತ ರಾಜೇಶ್ ಅವರು ನಿರ್ದೇಶಿಸಿದರು. ಮದ್ದೂರಿನ ನಳಂದ ವಿದ್ಯಾಪೀಠದ ಮಕ್ಕಳು ಅಭಿನಯಿಸಿದರು. ಆರನೆ ದಿನದ ಕೊನೆಯ ನಾಟಕವಾಗಿ ಶ್ರೀ ಕೆ.ವಿ.ಶಂಕರಗೌಡರ 'ಪಾದುಕಾ ಕಿರೀಟಿ' ನಾಟಕವು ಅಭಿನಯಿಸಲ್ಪಟ್ಟಿತು. ಮೈಸೂರಿನ ಪಿ.ಗಂಗಾಧರಸ್ವಾಮಿಯವರ ನಿರ್ದೇಶನವಿತ್ತು. ಮಂಡ್ಯದ ಜನದನಿ ಕಲಾವಿದರು ಎಲ್ಲಾ ಪಾತ್ರಗಳಿಗೆ ಜೀವಂತಿಕೆ ತುಂಬಿ ಅಭಿನಯಿಸಿದರು. ಮಂಡ್ಯದ ಜನದನಿ ಸಾಂಸ್ಕೃತಿಕ ಟ್ರಸ್ಟಿನ ಈ ನಾಟಕೋತ್ಸವಕ್ಕೆ ಕರ್ನಾಟಕ ಸಂಘ, ಮಂಡ್ಯ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಸದ್ವಿದ್ಯಾ ಶಿಕ್ಷಣ ಟ್ರಸ್ಟ್, ಮಂಡ್ಯ, ವಿವೇಕಾನಂದ ವಿದ್ಯಾಸಂಸ್ಥೆ, ಹನಕೆರೆ, ನಳಂದ ವಿದ್ಯಾಪೀಠ, ಮದ್ದೂರು, ಆರ್.ಕೆ. ವಿದ್ಯಾಸಂಸ್ಥೆ ಕೆ.ಹೊನ್ನಲಗೆರೆ ಇವರ ಸಹಕಾರವಿತ್ತು.
೧೨. ಸ್ವರ ಶತಕ' - ಭಾರತ ರತ್ನ ಡಾ.ಎಂ.ಎಸ್.ಸುಬ್ಬಲಕ್ಷಿö್ಮ ಶತಮಾನೋತ್ಸವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸರಣಿ : ದಿನಾಂಕ : ೨೮-೧೧-೨೦೧೬ ರ ಸಂಜೆ ೬ ಗಂಟೆಗೆ ಮಂಡ್ಯದ ಕಲಾಮಂದಿರದಲ್ಲಿ ಅಮೃತ ವೆಂಕಟೇಶ್ ಅವರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶ್ರೀ ಮತ್ತೂರು ಶ್ರೀನಿಧಿ ಅವರ ವಯೋಲಿನ್, ಶ್ರೀ ಮೈಸೂರು ರವಿಶಂಕರ್ ಅವರ ಮೃದಂಗ ವಾದನವಿತ್ತು. ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ದಕ್ಷಿಣ ಪ್ರಾದೇಶಿಕ ವಲಯ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ನೆರವೇರಿದ ಈ ಕಾರ್ಯಕ್ರಮಕ್ಕೆ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್, ಮೈಸೂರು, ಕರ್ನಾಟಕ ಸಂಘ, ಮಂಡ್ಯ ಇವರ ಸಹಕಾರವಿತ್ತು. ಬೆಂಗಳೂರಿನ ಪಿಜಿಎನ್‌ಸಿಎ ಎಸ್‌ಆರ್‌ಸಿ ಯ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಪಿ.ವಿ.ಕೃಷ್ಣಭಟ್ಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮೈಸೂರಿನ ಶ್ರೀಮತಿ ಶೈಲಜಾ ವೇಣುಗೋಪಾಲ್ ಹಾಗೂ ಶ್ರೀ ಟಿ.ಎಸ್.ವೇಣುಗೋಪಾಲ್ ಅವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಬೆಂಗಳೂರಿನ ಪಿಜಿಎನ್‌ಸಿಎ ಎಸ್‌ಆರ್‌ಸಿ ಯ ಕಾರ್ಯವಾಹಕ ನಿರ್ದೇಶಕರಾದ ಡಾ.ದೀಪ್ತಿ ನವರತ್ನ, ಎಸ್.ಪಿ.ವಿಜಿಎಂ. ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಹಿಮಾಂಶು ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರ ಉಪಸ್ಥಿತಿ ಇತ್ತು.
೧೩. ಶ್ರೀರಾಮಾಯಣ ದರ್ಶನಂ ಗಮಕ ವಾಚನ ಸಪ್ತಾಹ ಹಾಗೂ ಕುವೆಂಪು ಜನ್ಮೋತ್ಸವ ಸಮಾರಂಭ : ದಿನಾಂಕ : ೨೨-೧೨-೨೦೧೬ ರಿಂದ ೨೮-೧೨-೨೦೧೬ ರ ತನಕ ಒಂದು ವಾರ ಕಾಲ ಸಂಘದ ಆವರಣದಲ್ಲಿ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಆರ್. ಸತ್ಯನಾರಾಯಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳಾದ ಡಾ.ಬೋರೇಗೌಡ ಚಿಕ್ಕಮರಳಿ ವಹಿಸಿದ್ದರು. ಶ್ರೀರಾಮಾಯಣ ದರ್ಶನಂ ನ ಆಯ್ದ ಭಾಗಗಳನ್ನು ನಾಡಿನ ಪ್ರಖ್ಯಾತ ಗಮಕಿಗಳು ಹಾಗೂ ವ್ಯಾಖ್ಯಾನಕಾರರು ವಾಚಿಸಿ ವ್ಯಾಖ್ಯಾನಿಸಿದರು. ಪ್ರತಿದಿನ ಸಂಜೆ ೬ ರಿಂದ ೭.೩೦ ರವರೆಗೆ ನಿಯತವಾಗಿ ಕಾರ್ಯಕ್ರಮ ನೆರವೇರಿತು. ಮೊದಲ ದಿನ 'ಕವಿಕ್ರತುದರ್ಶನ' ಎಂಬ ಕಾವ್ಯ ಭಾಗವನ್ನು ಬೆಂಗಳೂರಿನ ಶ್ರೀ ಎ.ಆರ್. ಬದರೀಪ್ರಸಾದ್ ವಾಚಿಸಿದರು, ಶ್ರೀಮತಿ ಟಿ.ವಿ.ಮೀರಾ ವ್ಯಾಖ್ಯಾನಿಸಿದರು. ಎರಡನೆ ದಿನ 'ಶಿಲಾ ತಪಸ್ವಿನಿ' ಎಂಬ ಕಾವ್ಯ ಭಾಗವನ್ನು ಬೆಂಗಳೂರಿನ ಶ್ರೀ ಎಂ.ಆರ್. ಕೇಶವಮೂರ್ತಿ ವಾಚಿಸಿದರು, ಶ್ರೀಮತಿ ಶಾಂತಗೋಪಾಲ್ ವ್ಯಾಖ್ಯಾನಿಸಿದರು. ಮೂರನೆ ದಿನ 'ಶಬರಿಗಾದನು ಅತಿಥಿ ದಾಶರಥಿ' ಎಂಬ ಕಾವ್ಯ ಭಾಗವನ್ನು ಬೆಂಗಳೂರಿನ ಶ್ರೀಮತಿ ಜಲಜರಾಜು ವಾಚನ ಮಾಡಿದರೆ, ಮೈಸೂರಿನ ಡಾ.ಬಿ.ವಿ.ವಸಂತಕುಮಾರ್ ವ್ಯಾಖ್ಯಾನಿಸಿದರು. ನಾಲ್ಕನೇ ದಿನ 'ಕನಕ ಲಂಕಾನ್ವೇಷಣಂ' ಕಾವ್ಯಭಾಗವನ್ನು ಹಾಸನದ ಶ್ರೀ ಗಣೇಶ್ ಉಡುಪ ವಾಚಿಸಿದರು, ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ್ ವ್ಯಾಖ್ಯಾನಿಸಿದರು. ಐದನೇ ದಿನದ ಕಾರ್ಯಕ್ರಮದಲ್ಲಿ 'ನಿನ್ನ ಮಗಳಲ್ತೆನ್ನವಳ್ ಅನಲೆ' ಕಾವ್ಯಭಾಗವನ್ನು ಮೈಸೂರಿನ ಶ್ರೀಮತಿ ಶುಭ ರಾಘವೇಂದ್ರ ವಾಚಿಸಿದರು, ಕೃಷ್ಣರಾಜನಗರದ ಶ್ರೀ ಕೃ.ಪಾ.ಮಂಜುನಾಥ್ ಅವರು ವ್ಯಾಖ್ಯಾನಿಸಿದರು. ಆರನೇ ದಿನಕ್ಕೆ 'ದಶಾನನ ಸ್ವಪ್ನಸಿದ್ಧಿ' ಕಾವ್ಯಭಾಗವನ್ನು ಬೆಂಗಳೂರಿನ ಶ್ರೀ ಖಾಸೀಂ ಮಲ್ಲಿಗೆ ಮಡುವು ವಾಚಿಸಿದರು, ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ವ್ಯಾಖ್ಯಾನಿಸಿದರು. ವಾರದ ಕೊನೆಯ ದಿನ 'ರಯ್‌ಗೆ ಕರೆದೊಯ್ ಓ ಅಗ್ನಿ' ಎಂಬ ಕಾವ್ಯಭಾಗವನ್ನು ಬೆಂಗಳೂರಿನ ಶ್ರೀಮತಿ ಶೋಭಾ ಶಶಿಧರ್ ವಾಚಿಸಿದರು, ಶ್ರೀಮತಿ ಎಂ.ಎಸ್.ರತ್ನಮೂರ್ತಿ ಅವರು ವ್ಯಾಖ್ಯಾನಿಸಿದರು.
೧೪. ಕುವೆಂಪು ಜನ್ಮೋತ್ಸವ ಸಮಾರಂಭ : ದಿನಾಂಕ : ೨೯-೧೨-೨೦೧೬ ರ ಗುರುವಾರ ಸಂಜೆ ಮಂಡ್ಯದ ಸ್ವಾಮಿ ವಿವೇಕಾನಂದ ರಂಗಮAದಿರದಲ್ಲಿ ಮಾನ್ಯ ವಸತಿ ಸಚಿವರು, ಮಂಡ್ಯಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಂ.ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ರಾಷ್ಟ್ರಕವಿ ಕುವೆಂಪು ಕುರಿತಂತೆ ಸಾಹಿತಿ, ಸಂಸ್ಕೃತಿ ಚಿಂತಕ ಶ್ರೀಗುಬ್ಬಿಗೂಡು ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀ ಅ.ದೇವೇಗೌಡ, ಬೆಸ್ಕಾಂ ವಿಜಿಲೆನ್ಸ್ನ ಎಸ್.ಪಿ. ಶ್ರೀ ಪ್ರಕಾಶ್‌ಗೌಡ ಎಂ.ಎನ್. ಭಾಗವಹಿಸಿದ್ದರು. ಮಂಡ್ಯದ ಕುಮಾರಿ ನಿತ್ಯಶ್ರೀ ಮತ್ತು ಕು.ದಿಶಾಜೈನ್ ತಂಡದವರು ಕುವೆಂಪು ಗೀತಗಾಯನ ನಡೆಸಿಕೊಟ್ಟರು. ತದನಂತರ ಕುವೆಂಪು ಅವರ 'ಜಲಗಾರ' ನಾಟಕವನ್ನು ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಮಕ್ಕಳು ಸುಂದರವಾಗಿ ಅಭಿನಯಿಸಿದರು. ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಸಾಹಿತಿಗಳಾದ ಡಾ. ಮ.ರಾಮಕೃಷ್ಣ ವಹಿಸಿದ್ದರು. ಮೈಸೂರಿನ ಪ್ರಸಿದ್ಧ ಗಮಕಿಗಳಾದ ಶ್ರೀ ಕೃ.ರಾಮಚಂದ್ರ ಅವರು ಸಮಾರೋಪ ನುಡಿಗಳನ್ನು ನುಡಿದರು.
೧೫. ೫ನೇ ವರ್ಷದ ಡಾ.ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂವಾದ ಗೋಷ್ಠಿ : ದಿನಾಂಕ : ೦೫-೦೨-೨೦೧೭ರ ಭಾನುವಾರ ಸಂಜೆ ಶಿವಮೊಗ್ಗದ ಕಡಿದಾಳು ಮಂಜಪ್ಪ ಸಭಾಂಗಣ, ಜಿಲ್ಲಾ ಒಕ್ಕಲಿಗರ ಸಂಘದ ಆವರಣದಲ್ಲಿ ಪ್ರೊ.ಬಿ.ಜಯಪ್ರಕಾಶಗೌಡರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ೨೦೧೬ ನೇ ಸಾಲಿಗೆ ಕನ್ನಡ ಕಟ್ಟುವಿಕೆಗಾಗಿ ಮರಣೊತ್ತರವಾಗಿ ನಾಡೋಜ ದೇಜಗೌ ಹಾಗೂ ೨೦೧೭ನೇ ಸಾಲಿಗೆ ಭಾಷಾವಿಜ್ಞಾನ ಕ್ಷೇತ್ರದ ಕೃಷಿಗಾಗಿ ನಾಡೋಜ ಹಂಪನಾ ಅವರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿತ್ತು. ಮಾನ್ಯ ಕಂದಾಯ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು, ತೀರ್ಥಹಳ್ಳಿಯ ಶಾಸಕರು ಆಗಿರುವ ಶ್ರೀ ಕಿಮ್ಮನೆ ರತ್ನಾಕರ್, ಮಾಜಿ ಸಚಿವರು, ಶೃಂಗೇರಿ ಶಾಸಕರು ಆದ ಶ್ರೀ ಡಿ.ಎನ್.ಜೀವರಾಜ್, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಜೋಗನ್ ಶಂಕರ್, ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ, ಶಿವಮೊಗ್ಗದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ.ಕಡಿದಾಳ್‌ಗೋಪಾಲ್, ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರ್ಯದರ್ಶಿಗಳಾದ ಶ್ರೀ ಕಡಿದಾಳ್ ಪ್ರಕಾಶ್ ಭಾಗವಹಿಸಿದ್ದರು. ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ಡಿ.ಮಂಜುನಾಥ್, ಡಾ.ಹಾಮಾನಾ ಅವರ ಪುತ್ರ ಶ್ರೀ ಎಚ್.ಎಂ. ರವೀಂದ್ರ ಅವರು ಉಪಸ್ಥಿತರಿದ್ದರು. ಡಾ. ಹಾಮಾನಾ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಡಾ. ತೀ.ನಂ. ಶಂಕರ ನಾರಾಯಣ, ಡಾ.ಜೆ.ಕೆ.ರಮೇಶ್, ಪ್ರೊ.ಕೆ.ಸಿ.ದಾಕ್ಷಾಯಿಣಿ ಅವರು ಡಾ.ಹಾಮಾನಾ ಕುರಿತು ಮಾತನಾಡಿದರು; ನಾಡೋಜ ಹಂಪನಾ ಅವರೊಂದಿಗೆ ಪ್ರೊ.ಎಚ್.ಟಿ.ಕೃಷ್ಣಮೂರ್ತಿ, ಡಾ.ಮೇಟಿ ಮಲ್ಲಿಕಾರ್ಜುನ ಸಂವಾದದಲ್ಲಿ ಪಾಲ್ಗೊಂಡರು. ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪದ್ಮಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಹಾಮಾನಾ ರವರ ನೆನಪನ್ನು ಚಿರಂತನಗೊಳಿಸುವ ನಿಟ್ಟಿನಲ್ಲಿ ಪ್ರಶಸ್ತಿ ಸಂಸ್ಥಾಪಕ ಸದಸ್ಯರಾದ ಡಾ.ರಾಗೌ, ಡಾ.ಹ.ಕ.ರಾಜೇಗೌಡ, ಡಾ.ಡಿ.ಕೆ.ರಾಜೇಂದ್ರ, ಡಾ.ಎ.ರಂಗಸ್ವಾಮಿ, ಡಾ.ಸೋಮಶೇಖರಗೌಡ, ಡಾ.ಪದ್ಮಾಶೇಖರ್ ಅವರನ್ನು ನೆನಪಿಸಿಕೊಳ್ಳಬಹುದಾಗಿದೆ. ೧೬. ಶ್ರೀ ಸಿದ್ಧಾರೂಡ ದತ್ತಿನಿಧಿ ಉಪನ್ಯಾಸ : ದಿನಾಂಕ : ೧೭-೦೩-೨೦೧೭ ರ ಸಂಜೆ ೬ ಗಂಟೆಗೆ ಸಂಘದ ಆವರಣದಲ್ಲಿ 'ಭಕ್ತಿಪಂಥ-ವಿವಿಧ ನೆಲೆಗಳು' ಎಂಬ ವಿಷಯದ ಮೇಲೆ ಮೈಸೂರಿನ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿಗಳು ಆದ ಡಾ.ಕೆ.ಅನಂತರಾಮು ಅವರು ತಳಸ್ಪರ್ಶಿ ಉಪನ್ಯಾಸವನ್ನು ನೀಡಿದರು. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರು ಆದ ಡಾ.ಎಚ್.ಎಸ್. ಮುದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳಾದ ಡಾ. ಅರ್ಜುನಪುರಿ ಅಪ್ಪಾಜಿಗೌಡ ಹಾಗೂ ಸಂಘದ ಅಧ್ಯಕ್ಷರಾದ ಪ್ರೊ. ಬಿ.ಜಯಪ್ರಕಾಶಗೌಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
೧೬. ಶ್ರೀ ಸಿದ್ಧಾರೂಡ ದತ್ತಿನಿಧಿ ಉಪನ್ಯಾಸ : ದಿನಾಂಕ : ೧೭-೦೩-೨೦೧೭ ರ ಸಂಜೆ ೬ ಗಂಟೆಗೆ ಸಂಘದ ಆವರಣದಲ್ಲಿ 'ಭಕ್ತಿಪಂಥ-ವಿವಿಧ ನೆಲೆಗಳು' ಎಂಬ ವಿಷಯದ ಮೇಲೆ ಮೈಸೂರಿನ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿಗಳು ಆದ ಡಾ.ಕೆ.ಅನಂತರಾಮು ಅವರು ತಳಸ್ಪರ್ಶಿ ಉಪನ್ಯಾಸವನ್ನು ನೀಡಿದರು. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರು ಆದ ಡಾ.ಎಚ್.ಎಸ್. ಮುದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳಾದ ಡಾ. ಅರ್ಜುನಪುರಿ ಅಪ್ಪಾಜಿಗೌಡ ಹಾಗೂ ಸಂಘದ ಅಧ್ಯಕ್ಷರಾದ ಪ್ರೊ. ಬಿ.ಜಯಪ್ರಕಾಶಗೌಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
೧೭. ಕನಕ ಕಾವ್ಯ ಗಮಕ ಸಪ್ತಾಹ : ನಳಚರಿತೆ ಮತ್ತು ರಾಮಧಾನ್ಯ ಚರಿತೆ : ದಿನಾಂಕ : ೧೮-೦೩-೨೦೧೭ ರ ಶನಿವಾರ ಸಂಜೆ ೬ ಗಂಟೆಗೆ ಸಂಘದ ಆವರಣದಲ್ಲಿ ಬೆಂಗಳೂರು ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಆರ್. ಸತ್ಯನಾರಾಯಣ ಅವರ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊAಡಿತು. ಉದ್ಘಾಟನಾ ಸಮಾರಂಭ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಕಾ.ತ.ಚಿಕ್ಕಣ್ಣನವರು ವಹಿಸಿದ್ದರು. ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಕೆ. ಹರೀಶ್‌ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಿನಾಂಕ :೧೮-೦೩-೨೦೧೭ ರಿಂದ ೨೪-೦೩-೨೦೧೭ ರವರೆಗೆ ಒಂದು ವಾರ ಕಾಲ ನಡೆದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮೊದಲ ನಾಲ್ಕು ದಿನಗಳ ಕಾಲ 'ನಳಚರಿತೆ'ಯ ವಾಚನ ವ್ಯಾಖ್ಯಾನ ನಡೆಯಿತು. ಮೊದಲ ದಿನ ಬೆಂಗಳೂರಿನ ಶ್ರೀ ಎಂ.ಆರ್.ಸತ್ಯನಾರಾಯಣ ಅವರು ವಾಚಿಸಿದರೆ, ಡಾ. ಮ.ರಾಮಕೃಷ್ಣರವರು ವ್ಯಾಖ್ಯಾನಿಸಿದರು. ಎರಡನೇ ದಿನ ಮೈಸೂರಿನ ಶ್ರೀಮತಿ ಸಂಧ್ಯಾರಮೇಶ್ ಅವರು ಗಮಕ ನಡೆಸಿಕೊಟ್ಟರೆ, ಮೈಸೂರಿನ ಡಾ.ಜ್ಯೋತಿಶಂಕರ್ ವ್ಯಾಖ್ಯಾನಿಸಿದರು. ಮೂರನೇ ದಿನದ ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀಮತಿ ಶುಭಾ ರಾಘವೇಂದ್ರ ಅವರು ವಾಚನ ಮಾಡಿದರೆ ಬೆಂಗಳೂರಿನ ಡಾ.ಲಲಿತಾಂಬ ಅವರು ವ್ಯಾಖ್ಯಾನ ಮಾಡಿದರು. ನಾಲ್ಕನೆಯ ದಿನ ಬೆಂಗಳೂರಿನ ಶ್ರೀಮತಿ ಆರ್.ಜಗದೀಶ್ ಗಮಕ ನಡೆಸಿಕೊಟ್ಟರು. ಡಾ. ಪ್ರದೀಪ್‌ಕುಮಾರ್ ಹೆಬ್ರಿ ವ್ಯಾಖ್ಯಾನ ಮಾಡಿದರು. ಐದನೆಯ ದಿನದ ವಾಚನವನ್ನು ಶ್ರೀ ಸಿ.ಪಿ. ವಿದ್ಯಾಶಂಕರ್ ನೆರವೇರಿಸಿಕೊಟ್ಟರೆ ಡಾ.ಬೋರೇಗೌಡ ಚಿಕ್ಕಮರಳಿ ವ್ಯಾಖ್ಯಾನಿಸಿದರು. ಆರನೇ ದಿನದಲ್ಲಿ ಬೆಂಗಳೂರಿನ ಶ್ರೀಮತಿ ಶೋಭಾ ಶಶಿಧರ್ ವಾಚನ ಮಾಡಿದರೆ ತುಮಕೂರಿನ ಶ್ರೀ ಗ.ಸೀ.ಶ್ರೀನಿವಾಸಮೂರ್ತಿ ವ್ಯಾಖ್ಯಾನಿಸಿದರು. ಏಳನೇ ಅಂತಿಮದಿನ ಮೈಸೂರಿನ ಶ್ರೀಮತಿ ಧರಿತ್ರಿ ಆನಂದ್‌ರಾವ್ ವಾಚನ ಮಾಡಿದರು. ಮೈಸೂರಿನ ಶ್ರೀ ನಾರಾಯಣ ದೇಸಾಯಿ ವ್ಯಾಖ್ಯಾನಿಸಿದರು. ದಿನಾಂಕ : ೨೪-೦೩-೨೦೧೭ರ ಸಂಜೆ ನಿವೃತ್ತ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿಯವರ ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ವಹಿಸಿದ್ದರು.