`ಕನ್ನಡದ ಷೇಕ್ಸ್ ಪಿಯರ್’ ಎಂದೇ ಪ್ರಸಿದ್ಧರಾದ 19ನೇ ಶತಮಾನದ ಕೊನೆ 20ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿದ್ದ ಎಂ.ಎಲ್.ಶ್ರೀಕಂಠೇಶಗೌಡರು ಮಂಡ್ಯ ಜಿಲ್ಲೆ. ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು. ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ನ್ಯಾಯಾಧೀಶರಾಗಿದ್ದ ಶ್ರೀಕಂಠೇಶಗೌಡರು ನ್ಯಾಯಾಂಗವನ್ನು ಅಭ್ಯಾಸ ಮಾಡಿದಷ್ಟೇ ಪ್ರಾಮಾಣಿಕವಾಗಿ ಸಾಹಿತ್ಯ ಸಂಸ್ಕೃತಿಗಳನ್ನು ಅಭ್ಯಾಸ ಮಾಡಿದ್ದರು. ಜನಪದ ಸಂಸ್ಕೃತಿಯ ಬಗ್ಗೆ ವಿಶೇಷವಾಗಿ ಹಳ್ಳಿಯ ಬದುಕಿನ ಬಗ್ಗೆ ಗೌಡರಿಗೆ ಅಪಾರವಾದ ಒಲವಿತ್ತು. ಆ ಕಾಲಕ್ಕೆ `ದಿ ಗ್ರಾಜ್ಯುಯೇಟ್ಸ್ ಟ್ರೇಡಿಂಗ್ ಅಸೋಸಿಯೇಷನ್’ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ್ದು ಕನ್ನಡ ಪ್ರಕಾಶನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಆ ಕಾಲದಲ್ಲಿ ದಕ್ಷನ್ಯಾಯಾಧೀಶರಾಗಿ, ಪ್ರತಿಭಾವಂತರಾಗಿದ್ದವರು.
ಗೌಡರು ಇಂಗ್ಲೀಷ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುವುದರ ಜೊತೆಗೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿದ್ದರು. ಪತ್ರಿಕೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಗೌಡರನ್ನು ಬಹಳವಾಗಿ ಆಕರ್ಷಿಸಿದ ಸಾಹಿತಿ ಶೇಕ್ಷಫಿಯರ್ `ಪ್ರತಾಪ ರುದ್ರದೇವ’, `ಪ್ರಮೀಳಾರ್ಜುನೀಯ’ ಇವರ ರೂಪಾಂತರ ನಾಟಕಗಳು. ಇಂಗ್ಲೀಷ್‍ನ `ಚಿಕ್ಕಬಣಜಿಗರು’ `ಕನ್ಯಾವಿತ್ತಂತ್ತು’ ಎಂಬ ಎರಡು ಕಾದಂಬರಿಗಳನ್ನು ರೂಪಾಂತರಿಸಿದ್ದಾರೆ `ಸೀತಾ ಸ್ವಯಂವರ’ ಎಂಬ ನಾಟಕ ಮತ್ತು `ಭವಾನಿಬಾಳು’ ಎಂಬ ಕಾದಂಬರಿಗಳು ಇವರ ಸ್ವತಂತ್ರ ರಚನೆಗಳು. `ಚಾಮನೃಪಚಂದ್ರಪ್ರಭೆ’ ಎಂಬ ಕಾವ್ಯವನ್ನು ರಚಿಸಿದ್ದಾರೆ. ಗೌಡರ ಕನ್ನಡ ಜಾನಪದದ ದೇಶೀಯ ಮೊದಲ ವಿದ್ವಾಂಸರಾಗಿ `ಜಾನಪದ ಮುಂಗೋಳಿ’ ಎನಿಸಿದ್ದಾರೆ. ಇಂಥ ಮಹನೀಯರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕೆಂಬ ನಿಟ್ಟಿನಲ್ಲಿ ಕರ್ನಾಟಕ ಸಂಘವು ಇವರ ಹೆಸರಿನಲ್ಲಿ ಹಂಪಿ ವಿ.ವಿ.ಯಿಂದ ಮಾನ್ಯತೆ ಪಡೆದು `ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರವನ್ನು 2010ರಲ್ಲಿ ಪ್ರಾರಂಭಿಸಿ ನಡೆಸಿಕೊಂಡು ಬರುತ್ತಿದೆ.
ಕರ್ನಾಟಕ ಸಂಘವು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕವಾಗಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ. ಇದರ ಪ್ರಯತ್ನದನ್ವಯ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರವಾಗಿ 2007-08 ನೇ ಸಾಲಿನಲ್ಲಿ ಮಾನ್ಯತೆ ಪಡೆದು ಸಂಶೋಧನಾ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿತು. ಕನ್ನಡ ಮತ್ತು ಚರಿತ್ರೆ ಹಾಗೂ ಪ್ರಾಚೀನ ಇತಿಹಾಸ ಪುರಾತತ್ವ ಶಾಸ್ತ್ರ ವಿಭಾಗ ವಿಷಯಗಳ ಸಂಯೋಜನೆಯಡಿಯಲ್ಲಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿ ವ್ಯಾಸಂಗಕ್ಕಾಗಿ ಸಂಶೋಧನಾ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಪ್ರಾರಂಭಿಸಿತು.
ಎಂ.ಫಿಲ್. ಪದವಿಗಾಗಿ ನೋಂದಾಯಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಕರ್ನಾಟಕದ ವಿವಿಧ ಭಾಗಗಳಿಂದ ನುರಿತ ವಿದ್ವಾಂಸರನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಬೋಧನಾಕಾರ್ಯ ಏರ್ಪಡಿಸಿತ್ತು. ವಿದ್ಯಾರ್ಥಿಗಳ ಸಂಶೋಧನಾ ಜ್ಞಾನ ವೃದ್ಧಿಗಾಗಿ ವಿಶೇಷ ಉಪನ್ಯಾಸ, ವಿಚಾರಸಂಕಿರಣ ಹಾಗೂ ಸಮ್ಮೇಳನಗಳನ್ನು ಸಂಶೋಧನಾ ಕೇಂದ್ರವು ಆಗಾಗ್ಗೆ ಆಯೋಜಿಸಿ ಸಂಶೋಧನಾ ಜ್ಞಾನವೃದ್ಧಿಗೆ ನೆರವಾಗುತ್ತಿದೆ. ಕನ್ನಡ ಹಾಗೂ ಚರಿತ್ರೆ ಹಾಗೂ ಪ್ರಾಚೀನ ಇತಿಹಾಸ ಪುರಾತತ್ವ ಶಾಸ್ತ್ರ ಈ ಎಲ್ಲಾ ವಿಷಯ ಸಂಯೋಜನೆಯಿಂದ 30 ವಿದ್ಯಾರ್ಥಿಗಳು ಎಂ.ಫಿಲ್ ಪದವಿ ಪಡೆಯುವ ಅವಕಾಶವಿತ್ತು.
ಕನ್ನಡ ಎಂ.ಫಿಲ್, ಪಿಎಚ್.ಡಿ ವಿಭಾಗದ ಅಧ್ಯಯನ ಮಂಡಳಿಯ ಮುಖ್ಯಸ್ಥರಾಗಿ ಖ್ಯಾತ ಸಾಹಿತಿಗಳಾದ ಡಾ. ರಾಗೌ ಅವರು ಕಾರ್ಯನಿರ್ವಹಿಸಿದ್ದರು. ವಿಷಯ ಸಂಯೋಜಕರಾಗಿ ಡಾ. ಚಿಕ್ಕಮರಳಿ ಬೋರೇಗೌಡರು ಚರಿತ್ರೆ ವಿಭಾಗದ ಮುಖ್ಯಸ್ಥರಾಗಿ ಡಾ.ಎನ್.ಎಸ್. ರಂಗರಾಜು, ಡಾ.ಎಂ.ವಿ. ಕೃಷ್ಣಪ್ಪ ಕಾರ್ಯ ನಿರ್ವಹಿಸಿದ್ದಾರೆ. ವಿಷಯ ಸಂಯೋಜಕರಾಗಿ ಡಾ. ಎಸ್. ಶಿವರಾಮು ಕರ್ತವ್ಯ ನಿರ್ವಹಿಸಿದ್ದರು. ಈ ಕೇಂದ್ರದಿಂದ ಕನ್ನಡ ವಿಷಯದಲ್ಲಿ ಸುಮಾರು 91 ಅಭ್ಯರ್ಥಿಗಳು ಹಾಗೂ ಚರಿತ್ರೆ ವಿಭಾಗದಲ್ಲಿ 37 ಅಭ್ಯರ್ಥಿಗಳು ಎಂ.ಫಿಲ್ ಪದವಿ ಪಡೆದು ನಾಡಿನಾದ್ಯಂತ ವೃತ್ತಿಯಲ್ಲಿದ್ದಾರೆ. ಅಲ್ಲದೇ ಈ ಕೇಂದ್ರದ ಸಂಶೋಧನಾ ವಿಷಯಗಳು ನಾಡಿನಾದ್ಯಂತ ಗುಣಮಟ್ಟದ ದೃಷ್ಟಿಯಿಂದ ಹೆಸರುಗಳಿಸಿದೆ.ಪಿಎಚ್.ಡಿ ಸಂಶೋಧನಾ ವಿಷಯದಲ್ಲಿ ಕನ್ನಡ ಮತ್ತು ಚರಿತ್ರೆ ವಿಭಾಗಗಳಲ್ಲಿ ವರ್ಷಕ್ಕೆ ತಲಾ ವಿಷಯಕ್ಕೆ ಇಬ್ಬರು ಅಭ್ಯರ್ಥಿಗಳು ಆಯ್ಕೆಗೊಂಡು ಸಂಶೋಧನೆ ನಡೆಸಲು ಅವಕಾಶವಿದೆ. ಅದರನ್ವಯ ಕನ್ನಡ ವಿಭಾಗದಲ್ಲಿ 9 ಅಭ್ಯರ್ಥಿಗಳು ಆಗಿಯೇ ಚರಿತ್ರೆ ವಿಭಾಗದಲ್ಲಿ 04 ಮಂದಿ ಪಿಎಚ್.ಡಿ ಪದವಿ ಪಡೆದಿರುತ್ತಾರೆ.
ಉನ್ನತ ಶಿಕ್ಷಣದಲ್ಲಿ ಇತ್ತೀಚೆಗೆ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಸಂಶೋಧನೆಗೆ ವಿಶ್ವವಿದ್ಯಾನಿಲಯಗಳಲ್ಲಿ ಅವಕಾಶಗಳು ವಿರಳವಾಗಿರುವುದರಿಂದ ಪ್ರಾದೇಶಿಕ ಮಾನ್ಯತಾ ಕೇಂದ್ರಗಳ ಸ್ಥಾಪನೆಯಿಂದ ಹೆಚ್ಚಿನ ಅವಕಾಶಗಳು ದೊರೆಯುವುದರಿಂದ ಸಂಶೋಧನೆಗೆ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪಡೆಯುವಂತಾಯಿತು. ಈ ಕೇಂದ್ರದಲ್ಲಿನ ಸುಸಜ್ಜಿತ ಗ್ರಂಥಾಲಯ ಹಾಗೂ ಪರಾಮರ್ಶನ ವಿಭಾಗವೂ ಸಂಶೋಧನಾ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಅಲ್ಲದೇ ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕರಿಗೆ ಸಂಶೋಧನಾ ಕಾರ್ಯಗಳಿಗೆ ಒತ್ತು ಕೊಡುವ ಉದ್ದೇಶದಿಂದ ಅವರಿಗೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಕೇಂದ್ರವು ನಡೆಸುತ್ತಿದೆ. ಸಂಶೋಧನಾ ಕೇಂದ್ರದ ಜೊತೆ ನಿರಂತರ ಸಂಪರ್ಕ ಬೆಳೆಸಲು ಬೇಕಾದ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಸಂಘ ಮಾಡುತ್ತಿದೆ.ಈ ಸಂಶೋಧನಾ ಕೇಂದ್ರವು ಕೇವಲ ಬೋಧನೆ ಹಾಗೂ ಸಂಶೋಧನೆಗೆ ಸೀಮಿತಗೊಳ್ಳದೆ ಪ್ರಕಟಣೆಗೂ ತನ್ನನ್ನು ವಿಸ್ತರಿಸಿಕೊಂಡು ಹಲವು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸುತ್ತಿದೆ.
ಕ್ರ.ಸಂ. | ಸಂಶೋಧಕರು | ಕೃತಿ | ಮಾರ್ಗದರ್ಶಕರು |
---|---|---|---|
೧. | ಕೋಕಿಲ ಪಿ | ಜನಪದ ಮಹಾಭಾರತ ಮತ್ತು ಕುಮಾರವ್ಯಾಸ ಭಾರತ ಒಂದು ತೌಲನಿಕ ವಿಶ್ವೇಷಣೆ. | ಡಾ.ಎ.ಆರ್.ಮದನ್‍ಕುಮಾರ್ |
೨. | ಮಂಗಳ ಎಸ್.ಸಿ. | ಆರ್ಯಾಂಬ ಮತ್ತು ತ್ರೀವೇಣಿ ಕಾದಂಬರಿಗಳಲ್ಲಿ ಸಾಮಜಿಕ ಸಂವೇದನೆ : ಒಂದು ಅಧ್ಯಯನ. | ಡಾ.ಬೋರೇಗೌಡ ಚಿಕ್ಕಮರಳಿ |
೩. | ಎಸ್.ಪೂರ್ಣಿಮಾ | ಮಂಡ್ಯ ಜಿಲ್ಲೆಯ ಶಾಸನಗಳು : ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅಧ್ಯಯನ. | ಡಾ.ಬೋರೇಗೌಡ ಚಿಕ್ಕಮರಳಿ |
೪. | ಮಮತ ಬಿ. | ನವ್ಯೋತ್ತರ ಮಹಿಳಾ ಕಥಾಸಾಹಿತ್ಯದಲ್ಲಿ ಸಮಾನತೆಯ ಪರಿಕಲ್ಪನೆ | ಡಾ.ಲಿಂಗರಾಜಯ್ಯ |
೫. | ರೂಪ ಪ್ರಿಯದರ್ಶಿನಿ | ನಮ್ಮ ಕಥನ ಸಾಹಿತ್ಯದಲ್ಲಿ ಮಹಿಳೆ | ಡಾ.ಹೆಚ್.ಪಿ.ಗೀತಾ |
೬. | ತೇಜಸ್ವಿನಿ ಟಿ.ವಿ. | ಮಂಡ್ಯ ಜಿಲ್ಲೆಯ ಸಣ್ಣಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆ. | ಡಾ.ಎ.ಆರ್. ಮದನ್‍ಕುಮಾರ್ |
೭. | ಚಂದ್ರಶೇಖರ್ ಜಿ.ಆರ್. | ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ ಕಥನ ಸಾಹಿತ್ಯ : ತೌಲನಿಕ ಅಧ್ಯಯನ | ಡಾ.ಪಿ.ಬೆಟ್ಟೇಗೌಡ |
೮. | ಮನುಕುಮಾರ್ ಬಿ.ಎಸ್. | ದಲಿತ ಕಾವ್ಯ ಮತ್ತು ಪ್ರತಿಭಟನೆ | |
೯. | ರವೀಂದ್ರ ಹೆಚ್.ಎಲ್. | ಶಿವರಾಮ ಕಾರಂತ ಕಾದಂಬರಿಗಳಲ್ಲಿ ಭೂಮಿ ಮತ್ತು ಮನುಷ್ಯ ಸಂಬಂಧದ ವಿನ್ಯಾಸಗಳು | ಡಾ. ಚಂದ್ರಪ್ಪ |
೧೦. | ನಂದೀಶ ಜಿ.ಎಂ. | ಪಿ.ಲಂಕೇಶ ಕಥನ ಸಾಹಿತ್ಯ : ಮನುಷ್ಯ ಸಂಬಂಧಗಳ ಸ್ವರೂಪ | ಡಾ.ಮಧುಸೂದನಾಚಾರ್ಯಜೋಶಿ |
ಕ್ರ.ಸಂ. | ಸಂಶೋಧಕರು | ಕೃತಿ | ಮಾರ್ಗದರ್ಶಕರು |
---|---|---|---|
೧. | ಸುನೀಲ್ ಕುಮಾರ್ ಬಿ.ಎಸ್ | ಮೇಲುಕೋಟೆ ದೇವಾಲಯಗಳು ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ. | ಡಾ.ಎನ್.ಸಾವಿತ್ರಿ |
೨. | ರಶ್ಮಿ ಆರ್.ಎನ್. | ಶ್ರೀರಂಗಪಟ್ಟಣದ ರಂಗನಾಥ ದೇವಾಲಯ : ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ. | ಡಾ.ಎನ್.ಸಾವಿತ್ರಿ |
೩. | ನಮಿತಾ ಪಿ. | ಹೈದರ್ ಮತ್ತು ಟಿಪ್ಪು ಕಾಲದ ಷಹರ್ ಗಂಜಾಂ - ಚಾರಿತ್ರಿಕ ಅಧ್ಯಯನ | ಡಾ.ಬಿ.ಎಸ್.ಪುಟ್ಟಸ್ವಾಮಿ |
೪. | ಮಹಾಂತೇಶ ಕುತನಿ | ತಂತ್ರ್ಯ ಮತ್ತು ಏಕೀಕರಣ ಚಳುವಳಿಯಲ್ಲಿ ಮಂಡ್ಯ ಜಿಲ್ಲೆಯ ಪಾತ್ರ | ಡಾ.ಎಸ್.ಶಿವರಾಮು |
೫. | ಮಂಜುಳಾ ಎ.ಸಿ. | ಮಹಿಳಾ ಚಿಂತನಾ ನೆಲೆಯಲ್ಲಿ ಎಂ.ಆರ್.ಲಕ್ಷಮ್ಮ | ಡಾ.ಎಸ್.ಶಿವರಾಮು |
೬. | ರೂಪೇಶ್‍ಕುಮಾರ್ ಎಚ್.ಎಲ್. | ಮಂಡ್ಯ ಜಿಲ್ಲೆಯ ಜೈನ ನೆಲೆಗಳು : ಸಾಂಸ್ಕೃತಿಕ ಅಧ್ಯಯನ | ಡಾ.ಹೆಚ್.ಎಸ್.ಬಸವೇಗೌಡ |
ಕರ್ನಾಟಕ ಸಂಘವು ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೊಸ ಆಯಾಮಗಳನ್ನು ನಿರ್ಮಿಸಿದ್ದು ಇಂತಹ ಸಾಹಸದ ಮತ್ತು ಮಹತ್ವದ ಭಾಗವಾಗಿ ೨೦೦೮ ಜನವರಿಯಲ್ಲಿ `ಅಭಿವ್ಯಕ್ತಿ’ ಎಂಬ ಮಾಸಪತ್ರಿಕೆ ಪ್ರಾರಂಭಿಸಿತು. ಪತ್ರಿಕೆ ಸಾಹಿತ್ಯ ಪ್ರಪಂಚದಲ್ಲಿ ಹೊಸ ಹೆಜ್ಜೆಯನ್ನು ಹಾಕಿದಿದಲ್ಲದೆ ವಾಚಕ-ಲೇಖಕರ ನಡುವಣ ಕಂದರಗಳನ್ನು ತುಂಬುತ್ತಾ ಸಾರ್ವಜನಿಕ ಜೀವನದಲ್ಲಿ ಹೊಸ ಅಭಿರುಚಿಯನ್ನು ರೂಪಿಸಿತು. ಕನ್ನಡ ಸಾಹಿತ್ಯದ ಪ್ರಕಾರಗಳಾದ ಕಲೆ, ಸಾಹಿತ್ಯ, ಸಂಗೀತ, ಭಾಷಾಂತರ, ಜಾನಪದ, ಕಾವ್ಯಮೀಮಾಂಸೆ, ವಿಮರ್ಶೆ ಕುರಿತಂತೆ ಮೌಲಿಕವಾದ ಲೇಖನಗಳನ್ನು ನಾಡಿನ ಪ್ರಸಿದ್ಧ ಚಿಂತಕರು, ವಿದ್ಯಾಂಸರುಗಳಿಂದ ಬರೆಸಿದ ಬರಹಗಳು ಓದುಗರ ಗಮನಸೆಳೆದು ಮೆಚ್ಚುಗೆಗೆ ಪಾತ್ರವಾಗಿ ಅಭಿವ್ಯಕ್ತಿ ಪತ್ರಿಕೆ ಜನಪ್ರಿಯವಾಯಿತು. ಅನೇಕ ಪ್ರಸಿದ್ಧ ವಿದ್ವಾಂಸರನ್ನು, ಬರಹಗಾರರನ್ನು ಈ ನಾಡಿಗೆ ಪರಿಚಯಿಸಿತು. ಅಪಾರ ಓದುಗ ವರ್ಗವನ್ನು ಸೃಷ್ಟಿಸಿದ ಕೀರ್ತಿ ಕರ್ನಾಟಕ ಸಂಘದ ಅಭಿವ್ಯಕ್ತಿ ಪತ್ರಿಕೆಗಿದೆ. ಈ ಮಹತ್ವದ ಪತ್ರಿಕೆಯ ಗೌರವ ಸಂಪಾದಕರಾಗಿ ನಾಡಿನ ಪ್ರಸಿದ್ಧ ವಿದ್ವಾಂಸರಾದ ಡಾ.ರಾಗೌ (ರಾಮೇಗೌಡ) ಅವರು ಪ್ರತೀ ಸಂಚಿಕೆಯಲ್ಲಿ ಮೌಲಿಕಬರಹಗಳನ್ನು ಓದುಗರಿಗೆ ನೀಡಿದ್ದಾರೆ. ವ್ಯವಸ್ಥಾಪಕ ಸಂಪಾದಕರಾಗಿ ಕರ್ನಾಟಕ ಸಂಘದ ಅಧ್ಯಕ್ಷರು, ಸಾಂಸ್ಕೃತಿಕ ಸಂಘಟಕರು ಆದ ಪ್ರೊ.ಜಯಪ್ರಕಾಶಗೌಡರು, ಸಂಪಾದಕರಾಗಿ ಕವಿಗಳೂ ವಿಮರ್ಶಕರೂ, ಸಂಶೋಧಕರೂ ಆದ ಡಾ.ಬೋರೇಗೌಡ ಚಿಕ್ಕಮರಳಿ ಮತ್ತು ಡಾ.ಮ.ರಾಮಕೃಷ್ಣ ಅವರು ಸಾರಥ್ಯವಹಿಸಿದ್ದರು.
ಸಂಪಾದಕ ಮಂಡಳಿಯ ಸದಸ್ಯರಾಗಿ ಪ್ರೊ.ಶಿವರಾಮು ಕಾಡನಕುಪ್ಪೆ ಮೈಸೂರು, ಪ್ರೊ.ಎಂ.ಜಿ.ಚಂದ್ರಶೇಖರಯ್ಯ, ದೊಡ್ಡಬಳ್ಳಾಪುರ ಡಾ.ಸಬಿಹಾಭೂಮಿಗೌಡ ಮಂಗಳೂರು, ಲಿಂಗರಾಜಯ್ಯಬೆಳಕೆರೆ ಬೆಂಗಳೂರು, ಡಾ.ಅರ್ಜುನಪುರಿಅಪ್ಪಾಜಿಗೌಡ ಮಂಡ್ಯ, ಲಿಂಗಣ್ಣಬಂಧುಕಾರ್ ಮಂಡ್ಯ. ಪ್ರೊ.ಎಚ್.ಎಲ್.ಮಹಾದೇವ, ಮಂಡ್ಯ ಡಾ.ವೈ.ಡಿ.ಲೀಲಾ ಮಂಡ್ಯ ಕಾರ‍್ಯ ನಿರ್ವಹಿಸಿದ್ದರು.