ಮಂಡ್ಯ ಜಿಲ್ಲೆಯವರಾದ ಡಾ.ರಾಗೌ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಹೊಂದಿದ್ದಾರೆ. ವಿದ್ವತ್ತು, ಸೃಜನಶೀಲ ಪ್ರತಿಭೆ, ಜಾನಪದ , ಸಾಹಿತ್ಯ ವಿಮರ್ಶೆ ಈ ನಾಲ್ಕು ಕ್ಷೇತ್ರಗಳಲ್ಲಿ ಮುಪ್ಪರಿಗೊಂಡಿರುವ ಶ್ರೀಯುತರು ಪ್ರಸ್ತುತ ಕರ್ನಾಟಕ ಸಂಘದ ಶೈಕ್ಷಣಿಕ ಚಟುವಟಿಕೆಗಳ ಜೀವನಾಡಿಯಾಗಿದ್ದಾರೆ. ಇಲ್ಲಿ ಜರುಗುವ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಸಾಕ್ಷಿಯಾಗಿ ಕರ್ನಾಟಕ ಜಾನಪದ ವಿ.ವಿ.ಯು ಕರ್ನಾಟಕ ಸಂಘದ ಆಶ್ರಯದಲ್ಲಿ ಕೈಗೊಂಡಿರುವ `ಕನ್ನಡ ಜಾನಪದ ನಿಘಂಟು; ಪದಸಂಸ್ಕೃತಿ ಕೋಶ’ ಎಂಬ ಬೃಹತ್ ಯೋಜನೆಯ ಸಂಪಾದಕರಾಗಿ ಈವರೆವಿಗೆ ಐದು ಸಂಪುಟಗಳು ಹೊರಬರುವಲ್ಲಿ ತಮ್ಮ ಪ್ರೌಢಿಮೆಯನ್ನು ಮೆರೆದಿದ್ದಾರೆ. ಮತ್ತೆ ಐದು ಸಂಪುಟಗಳು ರಚನೆಗೊಂಡು ಯೋಜನೆ ಪೂರ್ಣಗೊಂಡಾಗ `ಜಾನಪದ ಕ್ಷೇತ್ರದ ಕಿಟೆಲ್’ ಎಂಬ ಅಭಿದಾನಕ್ಕೆ ಪಾತ್ರರಾಗುತ್ತಾರೆ.