fashion img

ಕಾರ್ಯಕ್ರಮಗಳ ವರದಿ

೨೦೨೦ - ೨೧ ನೇ ಸಾಲಿನಲ್ಲಿ ನಡೆಸಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ

ದಿನಾಂಕ : ೦೧-೦೪-೨೦೨೦ ರಿಂದ ೩೧-೦೩-೨೦೨೧ ರವರೆಗೆ ನಡೆಸಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ.

ಅಭಿನಂದನಾ ಸಮಾರಂಭ : ಕರ್ನಾಟಕ ಸಂಘ ಹಾಗೂ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ದಿನಾಂಕ : ೦೬.೦೭.೨೦೨೦ರ ಸೋಮವಾರ ಸಂಜೆ ೪.೦೦ ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ವಹಿಸಿದ್ದರು. ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿಗಳಾದ ಪ್ರೊ.ಎನ್.ಎಸ್.ರಾಮೇಗೌಡ ಅಭಿನಂದನೆಯನ್ನು ನೆರವೇರಿಸಿದರು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಮುಖ್ಯಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಶ್ರೀ ಎಚ್.ಹೊನ್ನಪ್ಪ, ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಪಾಲ್ಗೊಂಡಿದ್ದರು. ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನಸ್ವಾಮಿ, ಉಪಾಧ್ಯಕ್ಷರಾದ ಶ್ರೀಮತಿ ಪಿ.ಕೆ.ಗಾಯತ್ರಿರೇವಣ್ಣ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೆ.ಯಾಲಕ್ಕಿಗೌಡ, ಅಣ್ಣೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀ ಎನ್.ರವಿ, ಪಿಡಿಓ ಕುಮಾರಿ ಎಂ.ಆರ್.ಅಶ್ವಿನಿ, ಹೆಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ, ಪಿಡಿಓ ಶ್ರೀಮತಿ ಲೀಲಾವತಿ, ನಗುವನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀ ಬಿ.ಆರ್.ನಂದಕುಮಾರ್, ಪಿಡಿಓ ಶ್ರೀ ಯೋಗೀಶ್ ಅವರನ್ನು ಅಭಿನಂದಿಸಲಾಯಿತು. ಕೇಂದ್ರ ಸರ್ಕಾರದ ಪುರಸ್ಕಾರಕ್ಕೆ ಪಾತ್ರವಾದ ಮಂಡ್ಯ ಜಿಲ್ಲಾ ಪಂಚಾಯ್ತಿ, ಮದ್ದೂರು ಹಾಗೂ ಶ್ರೀರಂಗಪಟ್ಟಣ ಗ್ರಾಮ ಪಂಚಾಯ್ತಿಗಳ ಪ್ರಮುಖರನ್ನು ಅಭಿನಂದಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ ಪ್ರೊ.ಜಯಪ್ರಕಾಶಗೌಡ, ಹನಕೆರೆ ಶ್ರೀ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಡಿ.ಶಿವರಾಜು ಕೀಲಾರ ಮತ್ತಿತರರು ಉಪಸ್ಥಿತರಿದ್ದರು.

ಕೆ.ವಿ.ಶಂಕರಗೌಡ ಜೊತೆಗಿನ ವೈಯಕ್ತಿಕ ಅನುಭವಗಳ ನೆನಪು :

ದಿನಾಂಕ : ೧೫.೦೭.೨೦೨೦ ರ ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನೆರವೇರಿತು. ಡಾ.ಜಿ.ಮಾದೇಗೌಡ, ಡಾ.ಎಚ್.ಡಿ.ಚೌಡಯ್ಯ, ಶ್ರೀ ಎಚ್.ಟಿ.ಕೃಷ್ಣಪ್ಪ, ಡಾ.ರಾಮಲಿಂಗಯ್ಯ , ಡಾ.ಎಸ್.ಬಿ.ಶಂಕರಗೌq, ಶ್ರೀ ಎಚ್.ವಿ.ಜಯರಾಮ್ ಶ್ರೀ ಕೆ.ವಿ.ಮುದ್ದಯ್ಯ ಕೀಲಾರ , ಪ್ರೊ.ಜಯಪ್ರಕಾಶಗೌಡ ಹೀಗೆ ಕೆ.ವಿ.ಎಸ್ ಅವರೊಡನೆ ಒಡನಾಡಿದವರ ಅನುಭವ ಹಂಚಿಕೊಳ್ಳುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿಇಎಸ್ ನೌಕರರಾದ ಶ್ರೀ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು.

ಪ್ರದರ್ಶಕ ಕಲೆಗಳ ಸರ್ಟಿಫಿಕೇಟ್ ಕೋರ್ಸ್ಗಳ ಉದ್ಘಾಟನಾ ಸಮಾರಂಭ : :

ಕೆಎಸ್ಜಿಹೆಚ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ.ಮೈಸೂರು ಹಾಗೂ ಕರ್ನಾಟಕ ಸಂಘ ಮಂಡ್ಯ ಇವರ ಸಹಯೋಗದಲ್ಲಿ ದಿನಾಂಕ : ೦೬.೦೮.೨೦೨೦ರ ಗುರುವಾರ ಬೆಳಿಗ್ಗೆ ೧೧.೦೦ ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಉದ್ಘಾಟಿಸಿದರು. ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಕೆಎಸ್ಜಿಹೆಚ್ ವಿವಿ ಕುಲಪತಿಗಳಾದ ಡಾ.ನಾಗೇಶ್ ವಿ.ಬೆಟ್ಟಕೋಟೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಾನಪದ ತಜ್ಞರಾದ ಡಾ.ಚಂದ್ರು ಕಾಳೇನಹಳ್ಳಿ, ರಂಗನಿರ್ದೇಶಕರಾದ ಶ್ರೀ ಪ್ರಮೋದ್ಶಿಗ್ಗಾಂವ್, ಮೃದಂಗ ವಿದ್ವಾನ್ ಎಸ್.ಸುದರ್ಶನ್, ಪ್ರೊ.ಜಯಪ್ರಕಾಶಗೌಡ ಅವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ :

ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನ ಮಂಡ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಡ್ಯ ಕರ್ನಾಟಕ ಸಂಘ ಮಂಡ್ಯ ಇವರ ಸಹಯೋಗದಲ್ಲಿ ೨೦೧೯-೨೦ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ೬೦೦ ರಿಂದ ೬೨೫ ರವರೆಗೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ, ಮಂಡ್ಯ ತಾಲ್ಲೂಕಿನಲ್ಲಿ ಶೇ೧೦೦ ರಷ್ಟು ಫಲಿತಾಂಶವನ್ನು ಪಡೆದಿರುವ ಪ್ರೌಢಶಾಲೆಗಳ ಅಭಿನಂದನೆ ಹಾಗೂ ೨೦೨೦ನೇ ಸಾಲಿನಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳನ್ನು ಗೌರವಿಸುವ ಸಮಾರಂಭವು ದಿನಾಂಕ : ೧೨.೦೯.೨೦೨೦ರ ಶನಿವಾರ ಬೆಳಿಗ್ಗೆ ೧೧.೦೦ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ವಹಿಸಿದ್ದರು. ತಹಶೀಲ್ದಾರ್ ಶ್ರೀ ಚಂದ್ರಶೇಖರ ಶಂಗಾಳಿ ಅವರು ಉದ್ಘಾಟಿಸಿದರು. ವಿಧಾನ ಪರಿಷತ್ ಶಾಸಕರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಆರ್.ರಘುನಂದನ್ ಅವರು ಸನ್ಮಾನಿಸಿದರು. ಮುಖ್ಯಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ, ಉತ್ತರವಲಯ ಬಿಇಓ ಶ್ರೀ ಶಿವಪ್ಪ, ದಕ್ಷಿಣ ವಲಯ ಬಿಇಓ ಶ್ರೀಮತಿ ಬಿ.ಟಿ.ಚಂದ್ರಕಾತ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಡಿ.ಶಿವರಾಜು ಕೀಲಾರ ಮತ್ತಿತರರು ಭಾಗವಹಿಸಿದ್ದರು.

ರಾಷ್ಟಕವಿ ಕುವೆಂಪು ಜನ್ಮೋತ್ಸವ :

ಪ್ರತಿವರ್ಷ ರಾಷ್ಟçಕವಿ ಕುವೆಂಪು ಜನ್ಮೋತ್ಸವ ಕಾರ್ಯಕ್ರಮವನ್ನು ಒಂದು ವಾರ ಕಾಲ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಆಯ್ದ ಭಾಗಗಳನ್ನು ಗಮಕವಾಚನ ಮಾಡಿಸುವ ಮೂಲಕ ಆಚರಿಸಲಾಗುತ್ತಿತು. ಈ ಬಾರಿ ಕೋವಿಡ್ ಕಾರಣದಿಂದ ಕುವೆಂಪು ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲು ತೀರ್ಮಾನಿಸಿ ದಿನಾಂಕ : ೨೯.೧೨.೨೦೨೦ರಂದು ಕುವೆಂಪು ಸಾಹಿತ್ಯವನ್ನು ಕುರಿತ ಉಪನ್ಯಾಸವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಚಾರ್ಯರಾದ ಡಾ.ಎಸ್.ಬಿ.ಶಂಕರೇಗೌಡ ಅವರು ವಹಿಸಿದ್ದರು. ಉಪನ್ಯಾಸವನ್ನು ಕನ್ನಡ ಪ್ರಾಧ್ಯಾಪಕರಾದ ಡಾ.ಮ.ರಾಮಕೃಷ್ಣ ಅವರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಡಾ.ಎಸ್.ಶಿವರಾಮು, ಡಾ.ಟಿ.ವಿ.ತೇಜಸ್ವಿನಿ, ಡಾ.ಎಂ.ಕೆoಪಮ್ಮ, ಶ್ರೀ ಲೋಕೇಶ್ ಪಿ.ಚಂದಗಾಲು ಅವರು ಪಾಲ್ಗೊಂಡಿದ್ದರು.

೯ನೇ ವರ್ಷದ ಡಾ.ಹಾಮಾನಾ ಪ್ರಶಸ್ತಿ ಪ್ರಧಾನ ಸಮಾರಂಭ :

ದಿನಾಂಕ : ೧೩.೨.೨೦೨೧ರ ಶನಿವಾರ ಬೆಳಿಗ್ಗೆ ೧೧.೦೦ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಕಾರ್ಯಕ್ರಮ ನೆರವೇರಿತು. ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿದರು. ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಶ್ರೀ ಎ.ಬಿ.ರಮೇಶ್ಬಾಬು ಬಂಡಿಸಿದ್ದೇಗೌಡ, ಶ್ರೀ ಬಿ.ರಾಮಕೃಷ್ಣ ಪಾಲ್ಗೊಂಡಿದ್ದರು. ಬೆಂಗಳೂರಿನ ಉದ್ಯಮಿಗಳಾದ ಶ್ರೀ ವಿವೇಕ್ಹೆಗ್ಗಡೆ, ಪ್ರೊ.ಜಯಪ್ರಕಾಶಗೌಡ ಉಪಸ್ಥಿತರಿದ್ದರು. ಹಿರಿಯ ವಿಭಾಗದ ಪ್ರಶಸ್ತಿಯನ್ನು ಮಾಜಿ ಶಾಸಕರಾದ ಶ್ರೀ ಕೋಣಂದೂರು ಲಿಂಗಪ್ಪ ಅವರಿಗೆ ಕಿರಿಯ ವಿಭಾಗದ ಪ್ರಶಸ್ತಿಯನ್ನು ಶ್ರೀ ಪ್ರಮೋದ್ಶಿಗ್ಗಾಂವ್ ಅವರಿಗೆ ಪ್ರದಾನ ಮಾಡಲಾಯಿತು

ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ :

ಅನನ್ಯ ಜನಪದ ಕಲೆಗಳಲ್ಲಿ ಒಂದಾದ ಅಳಿವಿನ ಅಂಚಿಗೆ ಸರಿದಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ದಿನಾಂಕ : ೧೫.೦೨.೨೦೨೧ ರಿಂದ ೧೫.೦೪.೨೦೨೧ ರವರೆಗೆ ಎರಡು ತಿಂಗಳಗಳ ಅವಧಿಯ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರವನ್ನು ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿತ್ತು. ತರಬೇತಿ ಶಿಬಿರದ ಉದ್ಘಾಟನೆಯನ್ನು ಮೈಸೂರು ರಂಗಾಯಣದ ನಿರ್ದೇಶಕರಾದ ಶ್ರೀ ಅಡ್ಡಂಡ ಕಾರ್ಯಪ್ಪ ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ವಹಿಸಿದ್ದರು. ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ, ಶಿಬಿರದ ನಿರ್ದೇಶಕರಾದ ಶ್ರೀ ಪ್ರಮೋದ್ ಶಿಗ್ಗಾಂವ್, ಭಾಗವತರಾದ ಟಿ.ಎಸ್.ರವೀಂದ್ರ, ಸಂಘದ ಕಾರ್ಯದರ್ಶಿ ಪಿ.ಲೋಕೇಶ್ ಚಂದಗಾಲು ಮತ್ತಿತರರು ಉಪಸ್ಥಿತರಿದ್ದರು.

ಕಿರುಜಲಪಾತ ಲೋಕಾರ್ಪಣೆ ಸಮಾರಂಭ :

ಸಂಘದ ಆವರಣದಲ್ಲಿ ನಿರ್ಮಿಸಲಾಗಿದ್ದ ಕಿರುಜಲಪಾತವನ್ನು ದಿನಾಂಕ : ೨೦.೩.೨೦೨೧ರ ಶನಿವಾರ ಸಂಜೆ ೫.೩೦ ಗಂಟೆಗೆ ಲೋಕಾರ್ಪಣೆಗೊಳಿಸಲಾಯಿತು. ಸಂಘದ ಪ್ರಧಾನ ಪೋಷಕರುಗಳಾದ ಶ್ರೀ ಎಂ.ಶ್ರೀನಿವಾಸ್, ಶ್ರೀ ಹೆಚ್.ಹೊನ್ನಪ್ಪ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಬಿ.ರಾಮಕೃಷ್ಣ, ಶ್ರೀಮಧು ಜಿ.ಮಾದೇಗೌಡ ಅವರ ಉಪಸ್ಥಿತಿಯಲ್ಲಿ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಸಿ.ಪಿ.ಉಮೇಶ್ ಅವರು ಲೋಕಾರ್ಪಣೆಗೊಳಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಶ್ರೀ ದೇವರಾಜೇಗೌಡ, ನಗರಸಭಾ ಸದಸ್ಯರಾದ ಶ್ರೀ ಎಂ.ಪಿ.ಅರುಣ್ಕುಮಾರ್, ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. “ಮಣಿದಿರಲಿ ಮುಡಿ; ಮತ್ತೆ ಮುಗಿದಿರಲಿ ಕೈ; ಮತ್ತೆ ಮಡಿಯಾಗಿರಲಿ ಬಾಳ್ವೆ. ಜೈಸುಗೆ ರಸತಪಸ್ಸು ದೊರೆಕೊಳುಗೆ ಚಿರಶಾಂತಿ; ಸಿರಿಗನ್ನಡಂ ಗೆಲ್ಗೆ !” - ರಾಷ್ಟçಕವಿ ಕುವೆಂಪು