fashion img

ದತ್ತಿ ಮತ್ತು ಪ್ರಶಸ್ತಿ

ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು

img

ಸಿ. ಗೌರಮ್ಮ ಸಮಾಜಸೇವಾ ಪ್ರಶಸ್ತಿ

ಮದ್ದೂರು ತಾ|| ಚಿಕ್ಕರಸಿನಕೆರೆ ಹೋ|| ಗೌಡಯ್ಯನ ದೊಡ್ಡಿ ಗ್ರಾಮದ ಚಿಕ್ಕಣ್ಣ ಉ|| ಚಿಕ್ಕಮೊಗಣ್ಣ ಅವರ ಮಗನಾದ ವಕೀಲ ಶ್ರೀ ಜಿ.ಸಿ.ಸತ್ಯ ಅವರು ತಮ್ಮ ಕುಟುಂಬದವರ ಪರವಾಗಿ ಗತಿಸಿರುವ ತಮ್ಮ ತಾಯಿ ಸಿ.ಗೌರಮ್ಮ ಅವರ ಹೆಸರಿನಲ್ಲಿ ದತ್ತಿಯೊಂದನ್ನು ಸ್ಥಾಪಿಸಿ ಪ್ರತಿವರ್ಷ ಸಮಾಜಸೇವೆಯಲ್ಲಿ ತೊಡಗಿರುವ ಓರ್ವ ಸಾಧಕರನ್ನು ಗುರ್ತಿಸಿ 15,000/- ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲು ವ್ಯವಸ್ಥೆ ಮಾಡಿದ್ದಾರೆ. ಕರ್ನಾಟಕ ಸಂಘದ ಒಂದು ವಿಶೇಷವಾದ ಕಾರ್ಯವನ್ನಿಲ್ಲಿ ಸಾರ್ವಜನಿಕರು ಗಮನಿಸಬೇಕು.

ಪ್ರಶಸ್ತಿ ಸ್ಥಾಪನೆಗೆ ಸಿದ್ಧರು ಮತ್ತು ಪ್ರಸಿದ್ಧರ ಹೆಸರುಗಳನ್ನು ಮಾತ್ರ ಪರಿಗಣಿಸುವುದಲ್ಲ. ಗೌರವಯುತರಾಗಿ ಬಾಳಿದ ಬದುಕಿದ ಶ್ರೀ ಸಾಮಾನ್ಯರು ಸಿದ್ಧ ಪ್ರಸಿದ್ಧರಷ್ಟೇ ಕರ್ನಾಟಕ ಸಂಘಕ್ಕೆ ಮುಖ್ಯರಾಗುತ್ತಾರೆ. ಕುವೆಂಪು ಆಶಯದಂತೆ ಶ್ರೀ ಸಾಮಾನ್ಯನೇ ಭಗವತ್ ಮಾನ್ಯಃ, ಶ್ರೀಸಾಮಾನ್ಯನೇ ಭಗವತ್‍ಧನ್ಯಃ ಈ ಉಕ್ತಿಗೆ ಅನುಗುಣವಾಗಿ ಕರ್ನಾಟಕ ಸಂಘ ಜಾತ್ಯಾತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಹೆಸರುಗಳನ್ನು ಪರಿಗಣಿಸಿ ದತ್ತಿಗಳನ್ನು ಸ್ಥಾಪಿಸಿಕೊಂಡು ಬರುತ್ತಿದೆ.